Sunday, 24th November 2024

Relaince Foundation : ರಿಲಯನ್ಸ್ ಫೌಂಡೇಷನ್‌ನಿಂದ ಲಕ್ಷಕ್ಕೂ ಹೆಚ್ಚು ಮಹಿಳೆಯರು, ಮಕ್ಕಳಿಗೆ ಉಚಿತ ಚಿಕಿತ್ಸೆ ಪ್ರಕಟ

Relaince Foundation

ಮುಂಬೈ : ರಿಲಯನ್ಸ್ ಫೌಂಡೇಷನ್‌ (Relaince Foundation) ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು ಹೊಸ ಆರೋಗ್ಯ ಸೇವಾ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಯೋಜನೆಯು ಮಕ್ಕಳು, ಹದಿಹರೆಯದ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಅಗತ್ಯ ತಪಾಸಣೆ ಹಾಗೂ ಚಿಕಿತ್ಸೆಗಳಿಗೆ ಆದ್ಯತೆ ನೀಡುತ್ತದೆ. ಈ ಹೊಸ ಆರೋಗ್ಯ ಸೇವಾ ಯೋಜನೆ ಭಾಗವಾಗಿ, ಆಸ್ಪತ್ರೆಯ 10ನೇ ವಾರ್ಷಿಕೋತ್ಸವದ ಸ್ಮರಣಾರ್ಥ 50,000 ಮಕ್ಕಳಲ್ಲಿ ಹುಟ್ಟಿನಿಂದ ಇರುವಂಥ ಹೃದಯ ಕಾಯಿಲೆಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ, 50,000 ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಮತ್ತು 10,000 ಹದಿಹರೆಯದ ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ಗೆ ಉಚಿತ ಲಸಿಕೆಯನ್ನು ನೀಡುವುದಾಗಿ ನೀತಾ ಅಂಬಾನಿ ಘೋಷಿಸಿದ್ದಾರೆ.

ನೀತಾ ಅಂಬಾನಿ ಅವರು ಮಾತನಾಡಿ, “10 ವರ್ಷಗಳಿಂದ ಸರ್ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯು ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ಪ್ರತಿ ಭಾರತೀಯರಿಗೂ ದೊರಕಿಸಲು ಮತ್ತು ಕೈಗೆಟುಕುವಂತೆ ಮಾಡುವ ಉದ್ದೇಶದೊಂದಿಗೆ ನಡೆಯುತ್ತಿದೆ. ಒಟ್ಟಾಗಿ ನಾವು ಲಕ್ಷಾಂತರ ಜೀವಗಳನ್ನು ತಲುಪಿದ್ದೇವೆ ಮತ್ತು ಅಸಂಖ್ಯಾತ ಕುಟುಂಬಗಳಿಗೆ ಭರವಸೆ ನೀಡಿದ್ದೇವೆ. ನಾವು ಈ ಮೈಲುಗಲ್ಲನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಆರ್ಥಿಕವಾಗಿ ಅಶಕ್ತರಾದ ಸಮುದಾಯಗಳ ಮಕ್ಕಳು ಮತ್ತು ಮಹಿಳೆಯರಿಗಾಗಿ ನಾವು ಹೊಸ ಆರೋಗ್ಯ ಸೇವಾ ಯೋಜನೆಯನ್ನು ಉಚಿತವಾಗಿ ಪ್ರಾರಂಭಿಸಿದ್ದೇವೆ. ಉತ್ತಮ ಆರೋಗ್ಯವು ಸಮೃದ್ಧ ರಾಷ್ಟ್ರದ ಅಡಿಪಾಯ ಮತ್ತು ಆರೋಗ್ಯವಂತ ಮಹಿಳೆಯರು ಹಾಗೂ ಮಕ್ಕಳು ಅಭಿವೃದ್ಧಿ ಹೊಂದುತ್ತಿರುವ ಸಮಾಜದ ಮೂಲಾಧಾರ ಎಂದು ನಾವು ನಂಬುತ್ತೇವೆ,” ಎಂದಿದ್ದಾರೆ.

ಇದನ್ನೂ ಓದಿ: Reliance Jio: ಜಿಯೊ ಕ್ಲೌಡ್ ಪಿಸಿ! ಮನೆಯ ಟಿವಿ ಕೇವಲ 100 ರೂ.ಯಲ್ಲಿ ಇನ್ನು ಕಂಪ್ಯೂಟರ್!

ಸರ್ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯು ಅಸಾಧಾರಣ ಆರೋಗ್ಯ ಸೇವೆಗಳನ್ನು ಒದಗಿಸುತ್ತಾ ಒಂದು ದಶಕ ಪೂರೈಸಿದೆ. ಕಳೆದ ದಶಕದಲ್ಲಿ ನಮ್ಮ ಆಸ್ಪತ್ರೆಯು 1.5 ಲಕ್ಷಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 27.5 ಲಕ್ಷ ಭಾರತೀಯರನ್ನು ತಲುಪಿದೆ. ಸರ್ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯು ತನ್ನ ರೋಗಿಗಳಿಗೆ ಅತ್ಯುತ್ತಮವಾದ ವೈದ್ಯಕೀಯ ಆರೈಕೆಯನ್ನು ನೀಡುವಲ್ಲಿ ಮುಂಚೂಣಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಳೆದ ದಶಕದಲ್ಲಿ ಗಮನಾರ್ಹ ಮೈಲುಗಲ್ಲು ಸಾಧಿಸಿದೆ. ಅಸಂಖ್ಯಾತ ಸಾಧನೆಗಳಲ್ಲಿ, ಸರ್ ಎಚ್ ಎನ್ ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯು 500ಕ್ಕೂ ಹೆಚ್ಚು ಅಂಗಾಂಗ ಕಸಿ ಚಿಕಿತ್ಸೆಗಳನ್ನು ನಡೆಸಿದೆ ಮತ್ತು 24 ಗಂಟೆಗಳಲ್ಲಿ 6 ಅಂಗಾಂಗಗಳನ್ನು ಕಸಿ ಮಾಡಿ, ಬಹು ಜೀವಗಳನ್ನು ಉಳಿಸಿದ ದಾಖಲೆಯನ್ನು ಹೊಂದಿದೆ. ಸರ್ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯು ಸತತವಾಗಿ ಭಾರತದಲ್ಲಿ ನಂಬರ್ ಒನ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಎಂದು ಗುರುತಿಸಲಾಗಿದೆ.