Friday, 22nd November 2024

Relationship Tips: ನಿಮ್ಮ ಸಂಗಾತಿಯ ಬಳಿ ಈ ವಿಷಯಗಳನ್ನು ಯಾವುದೇ ಕಾರಣಕ್ಕೂ ಮುಚ್ಚಿಡಬೇಡಿ!

Relationship Tips

ಸಂಗಾತಿ ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿರುತ್ತಾರೆ. ಏಕೆಂದರೆ ನಾವು ಅವರೊಂದಿಗೆ ನಮ್ಮ ಇಡೀ ಜೀವನವನ್ನು ಕಳೆಯಬೇಕಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪರಸ್ಪರರ ಮೇಲೆ ನಂಬಿಕೆ ಇರುವುದು  ಬಹಳ ಮುಖ್ಯವಾಗುತ್ತದೆ. ಇದರಿಂದ ನೀವು ಹಿಂಜರಿಕೆಯಿಲ್ಲದೆ ಪರಸ್ಪರ ಎಲ್ಲಾ ವಿಚಾರಗಳನ್ನು ಅವರಿಗೆ ಹೇಳಬಹುದು. ಆದರೆ ಕೆಲವೊಮ್ಮೆ ಸಂಗಾತಿಗಳು ಕೆಲವು ವಿಷಯಗಳ ಬಗ್ಗೆ ಹೇಳಲು ಹಿಂಜರಿಯುತ್ತಾರೆ ಅಥವಾ ಅವರಿಗೆ ಹೇಳಲು ನಾಚಿಕೆಪಡುತ್ತಾರೆ. ನೀವು ಈ ರೀತಿ ಮಾಡುವುದು ಇತರ ಜನರೊಂದಿಗೆ ಸರಿಯಾಗಿರಬಹುದು. ಆದರೆ ಗಂಡ ಮತ್ತು ಹೆಂಡತಿ ಎಂದಿಗೂ ಪರಸ್ಪರ ನಾಚಿಕೆಪಡಬಾರದು. ಇದರಿಂದ ಸಂಬಂಧದಲ್ಲಿ (Relationship Tips) ಸಮಸ್ಯೆ ಉಂಟಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ನೀವು ಹಿಂಜರಿಕೆಯಿಲ್ಲದೇ ಈ ವಿಷಯಗಳನ್ನು ಮುಕ್ತವಾಗಿ ಸಂಗಾತಿಗೆ ತಿಳಿಸಿ.

Relationship Tips

*ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದೌರ್ಬಲ್ಯಗಳಿರುತ್ತದೆ. ಯಾರೂ ಪರಿಪೂರ್ಣರಲ್ಲ, ಆದರೆ ನಿಮ್ಮ ದೌರ್ಬಲ್ಯಗಳನ್ನು ಮರೆಮಾಚುವ ಬದಲು, ಅವುಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುವುದು ಉತ್ತಮ. ಇದು ನಿಮ್ಮ ಸಂಗಾತಿಗೆ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನೀವಿಬ್ಬರೂ ಪರಸ್ಪರರನ್ನು ಬೆಂಬಲಿಸಲು ಸಾಧ್ಯವಾಗುತ್ತದೆ.

*ನಿಮ್ಮ ಭಾವನೆಗಳನ್ನು ನಿಗ್ರಹಿಸುವುದು ಆರೋಗ್ಯಕ್ಕೆ ಹಾನಿಕಾರಕ. ಸಂತೋಷ, ದುಃಖ, ಕೋಪ, ಪ್ರೀತಿ, ಈ ಎಲ್ಲಾ ಭಾವನೆಗಳು ಸ್ವಾಭಾವಿಕ. ಹಾಗಾಗಿ ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ.

*ಪ್ರತಿಯೊಬ್ಬ ವ್ಯಕ್ತಿಗೂ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ  ಅಗತ್ಯಗಳಿವೆ. ನಿಮ್ಮ ಈ  ಅಗತ್ಯಗಳನ್ನು ಮರೆಮಾಚಿದರೆ ನಿಮ್ಮ ಸಂಗಾತಿಗೆ ನಿಮಗೆ ಏನು ಬೇಕು ಎಂದು ಎಂದಿಗೂ ತಿಳಿಯುವುದಿಲ್ಲ. ಆದ್ದರಿಂದ, ನಿಮ್ಮ ಅಗತ್ಯಗಳನ್ನು ಬಹಿರಂಗವಾಗಿ ನಿಮ್ಮ ಸಂಗಾತಿಗೆ ತಿಳಿಸಲು  ಹಿಂಜರಿಯಬೇಡಿ.

*ಪ್ರತಿಯೊಬ್ಬ ವ್ಯಕ್ತಿಯು ತಪ್ಪುಗಳನ್ನು ಮಾಡುತ್ತಾನೆ. ತಪ್ಪುಗಳನ್ನು ಮಾಡುವುದು, ನಂತರ ಅದನ್ನು ಸರಿಪಡಿಸಿಕೊಳ್ಳುವುದು ಜೀವನದ ಒಂದು ಭಾಗವಾಗಿದೆ. ನಿಮ್ಮ ತಪ್ಪುಗಳನ್ನು ಸಂಗಾತಿಯ ಮುಂದೆ ಒಪ್ಪಿಕೊಂಡು ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುವುದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ.

*ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕಹಿ ಘಟನೆಗಳು ನಡೆದಿರುತ್ತದೆ. ಆದರೆ ಅಂತಹ ಕಹಿ ಘಟನೆಗಳನ್ನು ಸಂಗಾತಿಗೆ ತಿಳಿಸಬೇಕೇ ವಿನಃ ಈ ಬಗ್ಗೆ ಹಿಂಜರಿಕೆ ಇರಬಾರದು. ನಿಮ್ಮ ಹಿಂದಿನ ಜೀವನದ ಬಗ್ಗೆ ನಿಮ್ಮ ಸಂಗಾತಿಗೆ ಹೇಳುವುದು ಅವರೊಂದಿಗೆ ಆಳವಾದ ಸಂಬಂಧವನ್ನು ಬೆಳೆಸಲು ಸಹಾಯ ಮಾಡುತ್ತದೆ.

Relationship Tips

ಸಂಗಾತಿಯ ಜೊತೆ ಎಲ್ಲಾ ವಿಷಯಗಳನ್ನು ಹೇಳುವುದರಿಂದ ಆಗುವ ಪ್ರಯೋಜನಗಳು ಏನೇನು?:

*ನೀವು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿದಾಗ, ನಿಮ್ಮಿಬ್ಬರ ನಡುವಿನ ನಂಬಿಕೆ ಹೆಚ್ಚಾಗುತ್ತದೆ.

*ಮುಕ್ತವಾಗಿ ಮಾತನಾಡುವ ಮೂಲಕ, ಒಬ್ಬರನೊಬ್ಬರು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಇದು ಸಂಬಂಧವನ್ನು ಬಲಪಡಿಸುತ್ತದೆ.

* ಭಾವನೆಗಳನ್ನು ನಿಗ್ರಹಿಸುವುದು ಒತ್ತಡವನ್ನು ಹೆಚ್ಚಿಸುತ್ತದೆ. ಮುಕ್ತವಾಗಿ ಮಾತನಾಡುವುದು ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:ಬಸ್‍ನಲ್ಲಿ ಕುಳಿತ ವ್ಯಕ್ತಿ ಮತ್ತೆ ಮೇಲೇಳಲೇ ಇಲ್ಲ; ಈ ಸಾವೆಷ್ಟು ನಿಷ್ಕರುಣಿ!

ಈ ವಿಚಾರಗಳ ಬಗ್ಗೆ ತಿಳಿದುಕೊಂಡು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ನಿಮ್ಮ ಜೀವನದಲ್ಲಿ ನಡೆದ ಯಾವುದೇ ವಿಚಾರಗಳನ್ನು ಸಂಗಾತಿಯಿಂದ ಮುಚ್ಚಿಡದೆ ನೇರವಾಗಿ ಹೇಳುವ ಮೂಲಕ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಿ.