ಪತಿ-ಪತ್ನಿಯ ನಡುವೆ ಒಳ್ಳೆಯ ಬಂಧವಿದ್ದರೆ ಅವರ ಸಂಬಂಧ(Relationship Tips) ಗಟ್ಟಿಯಾಗಿರುತ್ತದೆ. ಆದರೆ ಕೆಲವೊಮ್ಮೆ ಏನೋ ಕ್ಷುಲ್ಲಕ ಕಾರಣಕ್ಕೆ ಅದು ಮುರಿದು ಬೀಳಬಹುದು. ಯಾಕೆಂದರೆ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇಲ್ಲದೇ ಇದ್ದಾಗ ಈ ಪರಿಸ್ಥಿತಿ ಎದುರಾಗುತ್ತದೆ. ಕೆಲವೊಂದನ್ನು ಆರಂಭದಲ್ಲಿಯೇ ಸರಿಮಾಡಿಕೊಳ್ಳಬಹುದು. ಆದರೆ ಅದಕ್ಕೆ ಅಹಂ ಅಡ್ಡಬರುತ್ತದೆ. ತನ್ನದೇ ಸರಿ, ಅವರದ್ದೇ ತಪ್ಪು ಎನ್ನುವ ವಾದ-ವಿವಾದಗಳು ನಡೆಯುತ್ತವೆ. ಸಂಬಂಧದಲ್ಲಿ ಬಿರುಕಿಗೆ ಕಾರಣವೇನು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.
ಗೌರವದ ಕೊರತೆ
ಯಶಸ್ವಿ ಸಂಬಂಧದ ಅಡಿಪಾಯವು ಪ್ರೀತಿ ಮತ್ತು ಗೌರವ ಎರಡರ ಮೇಲೂ ಅವಲಂಬಿತವಾಗಿರುತ್ತದೆ. ಒಬ್ಬ ವ್ಯಕ್ತಿಗೆ ಸಂಬಂಧದಲ್ಲಿ ಗೌರವ ಸಿಗದಿದ್ದರೆ ಅವರಿಗೆ ಸಂಗಾತಿಯ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಸಂಬಂಧದ ಬಗ್ಗೆ ಬೇಸರಪಟ್ಟುಕೊಂಡು ಆ ಸಂಬಂಧದಿಂದ ದೂರಹೋಗಲು ನಿರ್ಧರಿಸುತ್ತಾರೆ.
ವಿಶ್ವಾಸದ ಕೊರತೆ
ನಂಬಿಕೆ, ವಿಶ್ವಾಸವು ಯಾವುದೇ ಸಂಬಂಧದ ಜೀವನಾಡಿಯಾಗಿದೆ. ಅಡಿಪಾಯವಿಲ್ಲದ ಮನೆ ಹೇಗೆ ಕುಸಿಯುತ್ತದೆಯೋ, ಅದೇ ರೀತಿ ನಂಬಿಕೆ, ವಿಶ್ವಾಸವಿಲ್ಲದ ಯಾವುದೇ ಸಂಬಂಧವಾದರೂ ಮುರಿದುಹೋಗುತ್ತದೆ. ಸಂಗಾತಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ನಂಬಿಕೆ ಇಲ್ಲದಿದ್ದಾಗ ಸಂಬಂಧವೂ ದುರ್ಬಲವಾಗುತ್ತದೆ. ಆಗ ಅವರು ಈ ಸಂಬಂಧದ ಬಗ್ಗೆ ಬೇಸರಗೊಳ್ಳುತ್ತಾರೆ.
ಹಣದ ಕೊರತೆ
ಇಂದಿನ ದಿನಗಳಲ್ಲಿ ಅನೇಕ ಸಂಬಂಧಗಳು ಹಣದ ಮೇಲೆ ಆಧರಿಸಿವೆ. ಸಂಗಾತಿಯ ಬಳಿ ಸಾಕಷ್ಟು ಹಣವಿಲ್ಲದಿದ್ದರೆ ಅಂತವರು ಅವರ ಜೊತೆಗಿನ ಸಂಬಂಧದ ಬಗ್ಗೆ ಬೇಸರಪಟ್ಟುಕೊಳ್ಳುತ್ತಾರೆ. ಸಂಗಾತಿಯ ಆರ್ಥಿಕ ಸ್ಥಿತಿಯನ್ನು ನೋಡಿ ಯಾಕಾದರೂ ಇಂತವರ ಜೊತೆ ಸಂಬಂಧ ಬೆಳೆಸಿದೆ ಎಂದು ಪಶ್ಚಾತ್ತಾಪ ಪಡಲು ಶುರುಮಾಡುತ್ತಾರೆ.
ಇದನ್ನೂ ಓದಿ: ನಿತ್ಯ ರಾತ್ರಿ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಯ ಕಾಟ; ಪತಿ ಮಾಡಿದ್ದೇನು?
ಸಂವಹನದ ಕೊರತೆ
ಸಂಗಾತಿಗಳಿಬ್ಬರು ಪರಸ್ಪರ ಮುಕ್ತವಾಗಿ ಮಾತನಾಡಬೇಕು. ಆಗ ಅವರ ಬಗ್ಗೆ, ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು. ಆದರೆ ಸಮಯ ಕಳೆದಂತೆ ಅವರ ನಡುವಿನ ಮಾತುಕತೆ ಕಡಿಮೆಯಾಗುತ್ತಾ ಹೋಗುತ್ತದೆ. ಈ ಕಾರಣದಿಂದಾಗಿ, ಅವರು ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಅವರ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಅದು ಜಗಳಕ್ಕೆ ಕಾರಣವಾಗುತ್ತದೆ. ಕೊನೆಗೆ ಇದರಿಂದ ಸಂಬಂಧವನ್ನು ಹಾಳಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಂಬಂಧದ ಬಗ್ಗೆ ಕೆಲವರು ಬೇಸರಪಟ್ಟುಕೊಳ್ಳುತ್ತಾರೆ.