Monday, 25th November 2024

Reliance Foundation: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ರಿಲಯನ್ಸ್‌ ಫೌಂಡೇಷನ್‌ನಿಂದ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ

Reliance Foundation

ಬೆಂಗಳೂರು: ನೀವು ಪದವಿ, ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ರಿಲಯನ್ಸ್‌ ಫೌಂಡೇಷನ್‌ (Reliance Foundation) 2024-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ (Reliance Foundation Scholarships 2024-25). ಪದವಿ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 6 ಲಕ್ಷ ರೂ. ನೀಡುವ ಯೋಜನೆ ಇದಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಅಕ್ಟೋಬರ್‌ 6. ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವುದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ರಿಲಯನ್ಸ್‌ ಫೌಂಡೇಷನ್‌ ವತಿಯಿಂದ ಕಳೆದ 25 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌ ನೀಡಲಾಗುತ್ತಿದೆ. ಇದುವರೆಗೆ ದೇಶದ 23,000 ಅಧಿಕ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೆರವಾಗುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ.

ಅರ್ಹತೆ

ಪದವಿ ವಿದ್ಯಾರ್ಥಿಗಳು

  • ಪದವಿ ತರಗತಿಯ ಮೊದಲ ವರ್ಷದಲ್ಲಿರಬೇಕು.
  • ಭಾರತೀಯ ನಾಗರಿಕರಾಗಿರಬೇಕು.
  • 12ನೇ ತರಗತಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಶೇ. 60ರಷ್ಟು ಅಂಕ ಪಡೆದಿರಬೇಕು.
  • ರೆಗ್ಯುಲರ್‌, ಪೂರ್ಣಾವಧಿಯ ಪದವಿ ತರಗತಿಯಲ್ಲಿಬೇಕು.
  • ಕುಟುಂಬದ ವಾರ್ಷಿಕ ಆದಾಯ 15 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು (ವಾರ್ಷಿಕ 2.5 ಲಕ್ಷ ರೂ. ಇದ್ದವರಿಗೆ ಆದ್ಯತೆ).
  • ಆಪ್ಟಿಟ್ಯೂಡ್‌ ಟೆಸ್ಟ್‌ನಲ್ಲಿ ತೇಗರ್ಡೆಯಾಗಬೇಕು.

ಈ ಅಂಶ ಗಮನಿಸಿ

  • ಪದವಿ ತರಗತಿಯ 2 ಅಥವಾ ಅದಕ್ಕಿಂತ ಹೆಚ್ಚಿನ ವರ್ಷದಲ್ಲಿರುವವರು ಅರ್ಹರಲ್ಲ.
  • ಎಂಜಿನಿಯರಿಂಗ್‌, ಟೆಕ್ನಾಲಜಿ, ಎನರ್ಜಿ ಮತ್ತು ಲೈಫ್‌ ಸೈನ್ಸ್‌ಗಳಲ್ಲಿ ಆಯ್ದ ಕೋರ್ಸ್‌ಗಳ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  • ಸಂಸ್ಥೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.
  • ಆಯ್ಕೆಯಾದವರಿಗೆ 2 ಲಕ್ಷ ರೂ. ವಿದ್ಯಾರ್ಥಿ ವೇತನ ದೊರೆಯಲಿದೆ.

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು

  • ಸ್ವದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಭಾರತೀಯ ನಾಗರಿಕರು ಅರ್ಹರು.
  • ಅರ್ಜಿದಾರರು GATE ಅಥವಾ ಸಂಬಂಧಿತ ಪರೀಕ್ಷೆಯಲ್ಲಿ 550-1000 ಅಂಕಗಳನ್ನು ಹೊಂದಿರಬೇಕು.
  • ರೆಗ್ಯುಲರ್‌, ಪೂರ್ಣಾವಧಿಯ ತರಗತಿಯಲ್ಲಿಬೇಕು.
  • ಮೊದಲಿಗೆ, ಅರ್ಜಿದಾರರ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ನಂತರ ಆಪ್ಟಿಟ್ಯೂಡ್ ಪರೀಕ್ಷೆ ನಡೆಸಲಾಗುತ್ತದೆ. ಅರ್ಜಿಯ ಭಾಗವಾಗಿ ವಿದ್ಯಾರ್ಥಿಗಳು ದಾಖಲೆಗಳು, ಪ್ರಬಂಧಗಳು ಮತ್ತು ಉದ್ದೇಶದ ಹೇಳಿಕೆಗಳನ್ನು ಸಲ್ಲಿಸಬೇಕು. ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ.
  • ಆಯ್ಕೆಯಾದವರಿಗೆ 6 ಲಕ್ಷ ರೂ. ವಿದ್ಯಾರ್ಥಿ ವೇತನ ದೊರೆಯಲಿದೆ.

ಅಗತ್ಯ ದಾಖಲೆಗಳು

  • ಅರ್ಜಿದಾರರ ಛಾಯಾಚಿತ್ರ (ಪಾಸ್‌ಪೋರ್ಟ್‌ ಗಾತ್ರ)
  • ವಿಳಾಸದ ಪುರಾವೆ (ಶಾಶ್ವತ ವಿಳಾಸ)
  • ರೆಸ್ಯೂಮ್
  • 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಅಂಕಪಟ್ಟಿಗಳು
  • ಗೇಟ್ ಪ್ರವೇಶ ಪರೀಕ್ಷೆಯ ಅಂಕಪಟ್ಟಿ (ಅನ್ವಯವಾದರೆ)
  • ಪದವಿಪೂರ್ವ ಪದವಿಯ ಅಂಕಪಟ್ಟಿ
  • ಪ್ರಸ್ತುತ ಕಾಲೇಜು/ದಾಖಲಾತಿ ಸಂಸ್ಥೆಯ ವಿದ್ಯಾರ್ಥಿ ಪ್ರಮಾಣಪತ್ರ

ಅರ್ಜಿ ಸಲ್ಲಿಸುವ ವಿಧಾನ

ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://www.buddy4study.com/page/reliance-foundation-scholarships)

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://www.buddy4study.com/page/reliance-foundation-scholarships)

ಮೊಬೈಲ್‌ ನಂಬರ್‌, ಪಾಸ್‌ವರ್ಡ್‌ ಬಳಸಿ ಹೆಸರು ನೋಂದಾಯಿಸಿ. ಬಳಿಕ ಲಾಗಿನ್‌ ಆಗಿ ಕಂಡುಬರುವ ಅಪ್ಲಿಕೃಷನ್‌ ಬಟನ್‌ ಭರ್ತಿ ಮಾಡಿ. ಬಳಿಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಅರ್ಜಿ ಸಲ್ಲಿಸಿ.

ಈ ಸುದ್ದಿಯನ್ನೂ ಓದಿ: Government Job News: ವಯೋಮಿತಿ ಮೀರಿದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್;‌ ಎಲ್ಲ ವರ್ಗಕ್ಕೂ 3 ವರ್ಷ ಸಡಿಲಿಕೆ