Thursday, 19th September 2024

ರಿಲಯನ್ಸ್‌ ಫೌಂಡೇಷನ್‌ : 50,000 ಸ್ಕಾಲರ್‌ಶಿಪ್‌ ಪ್ರಕಟ

ಮುಂಬಯಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ 90ನೇ ಜನ್ಮದಿನಾಚರಣೆ ಪ್ರಯುಕ್ತ ರಿಲಯನ್ಸ್‌ ಫೌಂಡೇಷನ್‌ 50,000 ಸ್ಕಾಲರ್‌ಶಿಪ್‌ಗಳನ್ನು ಪ್ರಕಟಿಸಿದೆ.

ರಿಲಯನ್ಸ್‌ ಸಮೂಹದ ದಾನ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸುವ ರಿಲಯನ್ಸ್‌ ಫೌಂಡೇಷನ್‌, ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್‌ಶಿಪ್‌ಗಳನ್ನು ಘೋಷಿಸಲಿದೆ.

2022-23ರಲ್ಲಿ 5,000 ಪದವಿ ಪೂರ್ವ ಸ್ಕಾಲರ್‌ಶಿಪ್‌ಗಳನ್ನು ನೀಡಲಿದೆ. ಇದು 2 ಲಕ್ಷ ರೂ. ತನಕ ಸಿಗಲಿದೆ. 2023ರ ಫೆಬ್ರವರಿ 14ರ ತನಕ ಅರ್ಜಿ ಸಲ್ಲಿಸಬಹುದು ಎಂದು ಫೌಂಡೇಷನ್‌ ತಿಳಿಸಿದೆ.