ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ ಕಾಸ್ಟಿಂಗ್ ಮತ್ತು ಡಿಜಿಟಲ್ ಮಾನದಂಡ ಗಳ ಪ್ರಾಧಿಕಾರಕ್ಕೂ ನೋಟಿಸ್ ನೀಡಲಾಗಿದೆ. ‘ಸುದ್ದಿ ತೆಗೆದು ಹಾಕದಿದ್ದರೆ ಕ್ರಮ ಕೈಗೊಳ್ಳುವುದಾಗಿ’ ನ್ಯಾಯಾಲಯವು ಎಚ್ಚರಿಕೆ ಯನ್ನೂ ನೀಡಿದೆ.
“ಇದು ಒಂದು ಗಂಭೀರ ಅಪಾಯವಾಗಿದೆ; ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುದ್ದಿಗಳಿಗೆ ಜನರು ಭಿನ್ನಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಅರ್ಜಿದಾರರ ಸುರಕ್ಷತೆಗೆ ಸಂಬಂಧಿಸಿದಂತೆ ಈ ಸುದ್ದಿಗಳನ್ನು ಅಳಿಸಬೇಕು ಎಂದು ಹೇಳಿದೆ.
ಅರ್ಜಿದಾರರ ಹೆಸರು ಅಜ್ಮತ್ ಅಲಿ ಖಾನ್ ಎಂದಾಗಿದೆ. ಕಳೆದ ೮ ವರ್ಷಗಳಿಂದ ಈ ಮಹಿಳೆ ಯೊಂದಿಗೆ ‘ಲಿವ್ ಇನ್ ರಿಲೇಶನ್ ಶಿಪ್’ (ಮದುವೆಯಾಗದೆ ಲಿವಿಂಗ್ ಟುಗೆದರ್) ನಲ್ಲಿದ್ದೇನೆ. ಅವನ ವಿರುದ್ಧವಿರುವ ಮತಾಂತ ರದ ಆರೋಪವೂ ಸುಳ್ಳು ಎಂದು ಹೇಳಿದ್ದಾನೆ.