ರಿಯೊ ಡಿ ಜನೈರೊ : ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನವೀಕರಿಸಬಹುದಾದ ಇಂಧನ ವಲಯಗಳಲ್ಲಿ ದ್ವಿಮುಖ ಹೂಡಿಕೆಯನ್ನು (Renewable Energy Partnership ) ಉತ್ತೇಜಿಸುವ ಉದ್ದೇಶದಿಂದ ನವೀಕರಿಸಬಹುದಾದ ಇಂಧನ ಪಾಲುದಾರಿಕೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ, (Narendra Modi) ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಅವರೊಂದಿಗೆ 2ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯಲ್ಲಿ ಮಾತುಕತೆ ನಡೆಸಿದರು.
ಬ್ರೆಜಿಲ್ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಅವರು ಮಂಗಳವಾರ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ರಕ್ಷಣೆ,ಭದ್ರತೆ, ವ್ಯಾಪಾರ, ಹೂಡಿಕೆ, ಶಿಕ್ಷಣ, ಕ್ರೀಡೆ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸುವ ಬಗ್ಗೆ ಭರವಸೆಯನ್ನು ಉಭಯ ದೇಶಗಳು ನೀಡಿವೆ.
Sharing my remarks during meeting with PM Albanese of Australia. @AlboMP https://t.co/UGsT1mpWhJ
— Narendra Modi (@narendramodi) November 19, 2024
ಪ್ರಧಾನಿ ಮೋದಿ ಹಾಗೂ ಆಂಥೋನಿ ಅಲ್ಬನೀಸ್ ಭೇಟಿಯ ಮುಖ್ಯ ಉದ್ದೇಶ ನವೀಕರಿಸಬಹುದಾದ ಇಂಧನ ಪಾಲುದಾರಿಕೆಯನ್ನು ಹೆಚ್ಚಿಸುವುದಾಗಿತ್ತು. ಸೌರ ಶಕ್ತಿ, ಹಸಿರು ಜಲಜನಕ ಮತ್ತು ಶಕ್ತಿಯ ಸಂಗ್ರಹಣೆಯಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಈ ಮಾತುಕತೆ ಒಳಗೊಂಡಿತ್ತು.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಆಸ್ಟ್ರೇಲಿಯಾ ಪ್ರಧಾನಿ 2025 ರಲ್ಲಿ ಭಾರತ-ಆಸ್ಟ್ರೇಲಿಯಾ ರೂಫ್ಟಾಪ್ ಸೋಲಾರ್ ಅಕಾಡೆಮಿಯನ್ನು ಸ್ಥಾಪಿಸಿ ಸುಮಾರು ಎರಡು ಸಾವಿರಕ್ಕೂ ಅಧಿಕ ಭಾರತೀಯ ಯುವ ಜನಾಂಗಕ್ಕೆ ಇಂಧನ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. “ಈ ಹೊಸ ಪಾಲುದಾರಿಕೆಯು ಸೌರ, ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ದ್ವಿಮುಖ ಹೂಡಿಕೆಯನ್ನು ಉತ್ತೇಜಿಸುತ್ತದೆ. ಎಂದು ಅಲ್ಬನೀಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Our 🇦🇺🇮🇳 renewable energy partnership is officially launched.
— Anthony Albanese (@AlboMP) November 19, 2024
Great to see India’s Prime Minister @narendramodi today on the sidelines of the G20 Summit in Brazil.
This new partnership will boost two way investment in the renewable energy sectors in things like solar, green… pic.twitter.com/lfVyvwWNJ9
ವರ್ಕಿಂಗ್ ಹಾಲಿಡೇ ಮೇಕರ್ ವೀಸಾ ಮತ್ತು ಮೊಬಿಲಿಟಿ ಅರೇಂಜ್ಮೆಂಟ್ ಫಾರ್ ಟ್ಯಾಲೆಂಟೆಡ್ ಅರ್ಲಿ-ಪ್ರೊಫೆಷನಲ್ಸ್ ಸ್ಕೀಮ್ (MATES) ನಂತಹ ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ಭಾರತೀಯರು ಮತ್ತು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾ ಸರ್ಕಾರ ಬೆಂಬಲ ಸೂಚಿಸುತ್ತದೆ ಎಂದು ಅಲ್ಬನೀಸ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಹಂಚಿಕೊಂಡಿದ್ದ ಟ್ವೀಟ್ನ್ನು ಮರು ಹಂಚಿಕೊಂಡ ಪ್ರಧಾನಿ ಮೋದಿ ನನ್ನ ಉತ್ತಮ ಗೆಳೆಯ ಭೇಟಿಯಾಗಿ ಖುಷಿ ತಂದಿದೆ. ಜಾಗತಿಕ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಕಾಪಾಡುವಲ್ಲಿ ಈ ಯೋಜನೆ ಮಹತ್ವವಾಗಿದೆ ಎಂದು ಹೇಳಿದ್ದಾರೆ.
It’s always wonderful to meet my good friend, PM Albanese. The talks were extremely fruitful and our focus will remain on futuristic sectors which will further global growth and sustainability. @AlboMP https://t.co/pGPMtiP1tx
— Narendra Modi (@narendramodi) November 19, 2024
ಇದನ್ನೂ ಓದಿ : Modi-Meloni Visit: ಬ್ರೆಜಿಲ್ನಲ್ಲಿ ನರೇಂದ್ರ ಮೋದಿ -ಜಾರ್ಜಿಯಾ ಮೆಲೋನಿ ಭೇಟಿ