Saturday, 23rd November 2024

ರೆಪೊ ದರ ಯಥಾಸ್ಥಿತಿಯಲ್ಲಿಡಲು ಆರ್‌.ಬಿ.ಐ ನಿರ್ಧಾರ

ವದೆಹಲಿ: ಆರ್‌.ಬಿ.ಐ ನೀತಿ ನಿರ್ಧಾರಕ್ಕೆ ಮುಂಚಿತವಾಗಿ, ಯುಎಸ್ ಡಾಲರ್ ವಿರುದ್ಧ ರೂಪಾಯಿ 5 ಪೈಸೆ ಕುಸಿದು 81.95 ಕ್ಕೆ ತಲುಪಿದೆ.

ಅಂತರ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಡಾಲರ್ ವಿರುದ್ಧ 81.95 ಕ್ಕೆ ದುರ್ಬಲವಾಗಿ ಪ್ರಾರಂಭವಾಯಿತು, ಕಳೆದ ಮುಕ್ತಾಯ ಕ್ಕಿಂತ 5 ಪೈಸೆ ಕುಸಿತ ದಾಖಲಿಸಿದೆ.

ಹಣದುಬ್ಬರವು ಅಸ್ಥಿರವಾಗಿ ಮುಂದುವರಿಯುತ್ತಿರುವುದರಿಂದ, ಆರ್ಬಿಐ ಗುರುವಾರ ರೆಪೊ ದರವನ್ನು ಯಥಾ ಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಕೇಂದ್ರ ಬ್ಯಾಂಕ್ ಈಗಾಗಲೇ ಮೇ 2022 ರಿಂದ ಒಟ್ಟು 250 ಬಿಪಿಎಸ್ ರೆಪೊ ದರ ವನ್ನು ಹೆಚ್ಚಿಸಿದೆ.

ಆರ್‌.ಬಿ.ಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಿಂದ ಶೇ.6.5 ಕ್ಕೆ ಹೆಚ್ಚಿಸಲು ನಿರ್ಧರಿಸಿತು. ಮೇ 2022 ರಿಂದ ಇಲ್ಲಿಯವರೆಗೆ, ಆರ್‌.ಬಿ.ಐ ಬ್ಯಾಂಕುಗಳಿಗೆ ಸಾಲ ನೀಡುವ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ.

ಏಪ್ರಿಲ್ 3, ಏಪ್ರಿಲ್ 5 ಮತ್ತು ಏಪ್ರಿಲ್ 6 ರಂದು ಹಣಕಾಸು ನೀತಿ ಸಮಿತಿ ಸಭೆಯೊಂದಿಗೆ ಆರ್ಬಿಐ ಹೊಸ ಹಣ ಕಾಸು ವರ್ಷದ ಮೊದಲ ದ್ವೈಮಾಸಿಕ ಪರಾಮರ್ಶೆಯನ್ನು ಪ್ರಾರಂಭಿಸಿತು.

ರೆಪೋ ದರ ಎಂದರೆ, ಆರ್ಥಿಕತೆಯ ಹಲವಾರು ಹಣಕಾಸಿನ ಗುರಿಗಳನ್ನು ಸಾಧಿಸಲು ಮಾನ್ಯತೆ ಪಡೆದ ವಾಣಿಜ್ಯ ಬ್ಯಾಂಕ್‌ಗಳಿಗೆ ದೇಶದ ಕೇಂದ್ರ ಬ್ಯಾಂಕ್ ಹಣವನ್ನು ನೀಡುವ ಬಡ್ಡಿ ದರವಾಗಿದೆ. ‘ರೆಪೋ’ ಎಂಬ ಪದವು ‘ಮರು-ಖರೀದಿ ಆಯ್ಕೆ ಅಥವಾ ಒಪ್ಪಂದ’ ಎಂಬುದನ್ನು ಸೂಚಿಸುತ್ತದೆ.