Sunday, 8th September 2024

ರಿಸರ್ವ್ ಬ್ಯಾಂಕ್ ಬಡ್ಡಿದರ ಯಥಾಸ್ಥಿತಿ

RBI Governor

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.

Reserve Bank Of Indiaಪ್ರಸ್ತುತ ರೆಪೋದರ ಶೇ.4ರಷ್ಟು, ರಿವರ್ಸ್ ರೆಪೋ ದರವು ಶೇ.3.35ರಷ್ಟಿದೆ. ಬ್ಯಾಂಕುಗಳು ಆರ್ಬಿಐನಿಂದ ತುರ್ತು ಬಳಕೆಗೆ ಪಡೆ ಯುವ ಎಂಎಸ್‌ಎಫ್ ದರವೂ ಶೇ.4.25 ರಷ್ಟು ಮುಂದುವರೆಯಲಿದೆ.

ಬಡ್ಡಿದರ ನೀತಿಯನ್ನು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಸುವ ಮುಕ್ತ ಅವ ಕಾಶ ಇರುವ ನಿಲುವನ್ನು ಮುಂದುವರೆಸಿದೆ. ಹಣ ಕಾಸು ನೀತಿ ಸಮಿತಿ ಸಭೆಯ ನಂತರ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನಿರ್ಧಾರಗಳನ್ನು ಪ್ರಕಟಿಸಿದರು.

ಹಣಕಾಸು ಮಾರುಕಟ್ಟೆಯ ತಜ್ಞರು ಡಿಸೆಂಬರ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ 20 ರಿಂದ 50 ಅಂಶ ಗಳಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. ಮಾರುಕಟ್ಟೆಯ ನಿರೀಕ್ಷೆಗೆ ವ್ಯತಿರಿಕ್ತವಾಗಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡಿದೆ. ಆರ್ಬಿಐ ನಿರ್ಧಾರಕ್ಕೆ ಸಕಾರಾತ್ಮಕ ವಾಗಿ ಸ್ಪಂದಿಸಿರುವ ಷೇರುಪೇಟೆ ದಿನದ ವಹಿವಾಟಿನಲ್ಲಿ ಸುಮಾರು ಸೆನ್ಸೆಕ್ಸ್ 1000 ಅಂಶಗಳು ಮತ್ತು ನಿಫ್ಟಿ ಬ್ಯಾಂಕ್ 550 ಅಂಶ ಗಳಷ್ಟು ಏರಿಕೆ ದಾಖಲಿಸಿದವು.

ಇದರೊಂದಿಗೆ ಆರ್ಬಿಐ ಸತತ ಒಂಭತ್ತನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಡ್ಡಿದರ ಇಷ್ಟು ಸುಧೀರ್ಘ ಅವಧಿಗೆ ಸ್ಥಿರವಾಗಿರುವುದು ಇದೇ ಮೊದಲಾಗಿದೆ.

ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಸಾಲಗಳ ಮೇಲಿನ ಬೇಡಿಕೆ ಕೋವಿಡ್ ಪೂರ್ವದ ಮಟ್ಟಕ್ಕೆ ಏರಿದೆ. ಒಂದು ವೇಳೆ ಬಡ್ಡಿದರ ಏರಿಕೆಯಾದರೆ ಸಾಲದ ಮೇಲಿನ ಬೇಡಿಕೆ ಕುಸಿಯುವ ಸಾಧ್ಯತೆಯನ್ನೂ ಆರ್ಬಿಐ ನಿರೀಕ್ಷಿಸಿದೆ. ಈ ಕಾರಣ ಕ್ಕಾಗಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡಿದೆ.

error: Content is protected !!