ಮುಂಬೈ : ಎರಡು ವರ್ಷಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಹೆಚ್ಚಿಸಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಸುದ್ದಿ ಗೋಷ್ಠಿ ನಡೆಸಿ ರೆಪೋ ದರವನ್ನ ಶೇ.0.40ರಷ್ಟು ಹೆಚ್ಚಿಸಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸರಕುಗಳ ಬೆಲೆಗಳು ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಇತರ ಇಂಧನಗಳ ಮೇಲೆ ಹೆಚ್ಚುತ್ತಿರುವ ಒತ್ತಡವು ರೆಪೋ ದರ ಬದಲಾಯಿಸಲು ಒತ್ತಾ ಯಿಸಿದೆ ಎಂದು ಗವರ್ನರ್ ಹೇಳಿದ್ದಾರೆ.
ರೆಪೋ ದರ ಈಗ ಶೇ.4ರ ಬದಲಾಗಿ ಶೇ.4.40ರಷ್ಟಿರಲಿದೆ. ಮೇ 2020 ರಿಂದ ರೆಪೋ ದರವನ್ನ ಬದ ಲಾಯಿಸಿಲ್ಲ. ಜೂನ್ ತಿಂಗಳಿನಿಂದ ರೆಪೋ ದರ ಏರಿಕೆಯಾಗುವ ನಿರೀಕ್ಷೆಯಿತ್ತು.
ಪರಿಣಾಮ: ರೆಪೋ ದರಗಳ ಏರಿಕೆಯು ಸಾಲಗಳ EMI ಅನ್ನು ಹೆಚ್ಚಿಸುತ್ತದೆ. ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿಂದ ಸಾಲ ಪಡೆಯುವ ದರವು ರೆಪೋ ದರವಾಗಿದೆ. ಈ ಹೆಚ್ಚಳವು ಬ್ಯಾಂಕ್ ಸಾಲದ ವೆಚ್ಚ ವನ್ನು ಹೆಚ್ಚಿಸುತ್ತದೆ ಮತ್ತು ಗ್ರಾಹಕರಿಗೆ ಹೊರೆಯಾಗುತ್ತದೆ. ಈ ಹಿಂದೆ ಏಪ್ರಿಲ್‌ನಲ್ಲಿ ನಡೆದ ಪರಾ ಮರ್ಶೆಯಲ್ಲಿ ಸತತ 10ನೇ ಬಾರಿಗೆ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮೇ 22, 2020 ರಂದು, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 4 ಪ್ರತಿಶತಕ್ಕೆ ಇಳಿಸಿತು. ಅಂದಿನಿಂದ, ರೆಪೋ ದರಗಳು ಈ ಮಟ್ಟದಲ್ಲಿಯೇ ಉಳಿದಿವೆ.