Saturday, 14th December 2024

ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಸಂಪಾದಕರಿಗೆ ಸಮನ್ಸ್

ಮುಂಬೈ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರಿಗೆ ಸಮನ್ಸ್ ಜಾರಿ ಮಾಡಿದೆ.

ಬುಧವಾರ ಸಂಜೆ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ತಿಳಿಸಲಾಗಿದೆ. ಬಳಕೆದಾರ ರಿಗೆ ನಿರ್ದಿಷ್ಟ ರಿಪಬ್ಲಿಕ್ ಚಾನೆಲ್‌ನ್ನೇ ನೋಡಲು ಬಳಕೆದಾರರಿಗೆ ಹಣ ನೀಡುತ್ತಿರುವ ಬಗ್ಗೆ ಹನ್ಸ್ ರಿಸರ್ಚ್ ಟೀಮ್ ದೂರು ದಾಖಲಿಸಿತ್ತು. ರಿಪಬ್ಲಿಕ್ ಟಿವಿಯ ಹಿರಿಯ ಸಂಪಾದಕರಾದ ನಿರಂಜನ್ ನಾರಾಯಣಸ್ವಾಮಿ ಹಾಗೂ ಅಭಿಷೇಕ್ ಕಪೂರ್ ಅವರಿಗೆ ವಿಚಾರಣೆಗೆ ಹಾಜರಾಗು ವಂತೆ ಸೂಚಿಸಲಾಗಿದೆ.

ನಕಲಿ ಟಿಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ಸ್ ರಿಸರ್ಚ್ ಗ್ರೂಪ್‌ನ ಮಾಜಿ ಸಿಬ್ಬಂದಿ ಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.  ಬಳಕೆದಾರರಿಗೆ ಹಣ ಹಂಚಿಕೆ ಹಾಗೂ ಟಿವಿ ಚಾನೆಲ್‌ಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ವಿನಯ್ ತ್ರಿಪಾಠಿ ಪ್ರಮುಖ ಪಾತ್ರವಹಿಸಿ ದ್ದಾರೆ ಎನ್ನುವುದು ಮುಂಬೈ ಪೊಲೀಸರ ವಾದವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ, ಬಾಕ್ಸ್ ಸಿನಿಮಾ ಹಾಗೂ ಫಕ್ತ್ ಮರಾಠಿ ವಾಹಿನಿ ಹಾಗೂ ಅದರ ಮುಖ್ಯಸ್ಥರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ಹನ್ಸ್ ರಿಸರ್ಚ್ ಗ್ರೂಪ್‌ನ ಸಿಇಒ ಹೇಳಿಕೆಯನ್ನು ಕೂಡ ಪಡೆಯಲಾಗಿದೆ, ಮತ್ತು ದೂರುದಾರರ ಹೇಳಿಕೆಯನ್ನೂ ದಾಖಲಿಸಲಾಗಿದೆ.