Sunday, 8th September 2024

ಅಗ್ನಿಪಥ್ ನೇಮಕಾತಿಯಲ್ಲಿ ಶೇ.20 ಅಭ್ಯರ್ಥಿಗಳು ಮಹಿಳೆಯರೇ: ನೌಕಾಪಡೆ

ನವದೆಹಲಿ: ಅಗ್ನಿಪಥ್ ನೇಮಕಾತಿ ಯೋಜನೆಯಲ್ಲಿ ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನಲ್ಲಿ ಶೇ.20 ಅಭ್ಯರ್ಥಿಗಳು ಮಹಿಳೆಯ ರಾಗಿರುತ್ತಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ.

ನೌಕಾಪಡೆಯು 2022ರಲ್ಲಿ 3000 ‘ಅಗ್ನಿವೀರ’ರನ್ನು ಸೇರ್ಪಡೆ ಮಾಡಿಕೊಳ್ಳಲು ಸಜ್ಜಾಗಿದೆ. ಜು.1 ರಂದು ಮೊದಲ ಬ್ಯಾಚ್‌ಗಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸುಮಾರು 10 ಸಾವಿರ ಮಹಿಳೆಯರು ಹೆಸರು ನೋಂದಾಯಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ನೌಕಾಪಡೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 15 ರಿಂದ ಆರಂಭವಾಗಿದ್ದು, ಜು.30ರವರೆಗೂ ಕಾಲಾವಕಾಶವಿದೆ.

ಭಾರತೀಯ ನೌಕಾಪಡೆಯಲ್ಲಿ ಈಗಾಗಲೇ 30 ಮಹಿಳಾ ಅಧಿಕಾರಿಗಳು ವಿವಿಧ ಹುದ್ದೆ ಗಳನ್ನು ನಿಭಾಯಿಸುತ್ತಿದ್ದಾರೆ. ಹಾಗಾಗಿ ಅಗ್ನಿಪಥ್ ಯೋಜನೆಯಡಿಯಲ್ಲಿ ಮಹಿಳೆಯ ರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದೇವೆ.

ನವೆಂಬರ್ 21 ರಿಂದ ಒಡಿಶಾದ INS ಚಿಲ್ಕಾದಲ್ಲಿ ನೌಕಾಪಡೆಯ ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ತರಬೇತಿ ಆರಂಭವಾಗಲಿದೆ.

ಸೇನೆ ಸೇರಲು ಅರ್ಜಿ ಸಲ್ಲಿಸುವವರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ ನೀಡಬೇಕು. ಪೊಲೀಸರು ಇದನ್ನು ಪರಿಶೀಲನೆ ನಡೆಸಲಿದ್ದಾರೆ. ಆಕಾಂಕ್ಷಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ ಅಂಥವರು ಸೇನೆ ಸೇರಲು ಸಾಧ್ಯವಿಲ್ಲ ಎಂದು ಅನಿಲ್‌ ಪುರಿ ಹೇಳಿದ್ದಾರೆ.

error: Content is protected !!