ಈ ಬಗ್ಗೆ CISCE, ತನ್ನ ಅಧಿಕೃತ ವೆಬ್ ಸೈಟ್ cisce.org ಅಥವಾ results.cisce.org ಜಾಲತಾಣದಲ್ಲಿ ಐಸಿಎಸ್‌ಇ 10ನೇ ತರಗತಿ ಹಾಗೂ ಐಎಸ್ಸಿಯ 12ನೇ ತರಗತಿಯ ಮೊದಲ ಅವಧಿಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅಧಿಕೃತ ವೆಬ್ ಸೈಟ್ ಗಳಿಗೆ ಹೋಗಿ- cisce.org, results.cisce.org
ಎಸ್‌ಎಂಎಸ್ ಮೂಲಕ ಐಸಿಎಸ್‌ಇ/ಐಎಸ್ಸಿ ಫಲಿತಾಂಶಗಳನ್ನು ಪಡೆಯುವುದು ಹೇಗೆ?
1. ನಿಮ್ಮ ಎಸ್‌ಎಂಎಸ್ ಬಾಕ್ಸ್ ತೆರೆಯಿರಿ
2. ಐಸಿಎಸ್‌ಇ>ನಿಮ್ಮ ವಿಶಿಷ್ಟ ಐಡಿ> ಟೈಪ್ ಮಾಡಿ ಮತ್ತು ಅದನ್ನು 09248082883
3. ಐಎಸ್ಸಿ>ನಿಮ್ಮ ವಿಶಿಷ್ಟ ಐಡಿ> ಟೈಪ್ ಮಾಡಿ ಮತ್ತು ಅದನ್ನು 09248082883
ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಫಲಿತಾಂಶ ಎಸ್ ಎಂ ಎಸ್ ಮೂಲಕ ಲಭ್ಯವಾಗಲಿದೆ.
ಅಂದಹಾಗೇ, ಕಳೆದ ವರ್ಷ ನವೆಂಬರ್ 29 ರಿಂದ ಡಿಸೆಂಬರ್ 16 ರ ನಡುವೆ ಐಸಿಎಸ್ ಇ ಪರೀಕ್ಷೆಗಳು ನಡೆದಿತ್ತು. ಐಎಸ್ ಸಿ ಪರೀಕ್ಷೆಗಳನ್ನು ನವೆಂಬರ್ 22 ಮತ್ತು ಡಿಸೆಂಬರ್ 20ರ ನಡುವೆ ನಡೆಸಲಾಗಿತ್ತು.