ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ವಿಭಾಗಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆ ಉಲ್ಲಂಘ ನೆಯ ಅಡಿಯಲ್ಲಿ ಆತನನ್ನು ಬಂಧಿಸ ಲಾಗಿದೆ. ನಿಕೋಲ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಚುನಾವಣಾ ಕಣ್ಗಾವಲು ತಂಡದ ಮುಖ್ಯಸ್ಥ ಮತ್ತು ಕಾರ್ಯ ನಿರ್ವಾಹಕ ಮ್ಯಾಜಿಸ್ಟ್ರೇಟ್ ಹಿಮಾಂಶು ಪರ್ಮಾರ್ ಅವರು ತಮ್ಮ ತಂಡವು ಥಕ್ಕರ್ನಗರ ಚೌಕದಲ್ಲಿ ಕಾರನ್ನು ಅಡ್ಡಗಟ್ಟಿದೆ.
ತಪಾಸಣೆ ನಡೆಸಿದಾಗ ಚಾಲಕನ ಸೀಟಿನ ಕೆಳಗೆ ಪಿಸ್ತೂಲಿನಂತಹ ಆಯುಧ ಪತ್ತೆಯಾಗಿದೆ. ಕಲ್ಪ್ ಪಾಂಡ್ಯ ಕಾರು ಚಾಲನೆ ಮಾಡುತ್ತಿದ್ದು, ವಿಚಾರಣೆ ನಡೆಸಿದಾಗ ಆಯುಧ ತನಗೇ ಸೇರಿದ್ದು ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಪರವಾನಗಿಯನ್ನು ಕೇಳಿದಾಗ, ಕಲ್ಪ್ ತನ್ನ ಬಳಿ ಇಲ್ಲ ಎಂದು ಹೇಳಿದ್ದಾನೆ. ಈ ಆಯುಧದ ಮಾರುಕಟ್ಟೆ ಮೌಲ್ಯ ಸುಮಾರು 2 ಲಕ್ಷ ರೂಪಾಯಿ ಎಂದು ತಿಳಿಸಿದ್ದಾರೆ. ಕಲ್ಪ್ ಅವರೊಂದಿಗೆ ಇತರ ಇಬ್ಬರು ಯುವಕರು ಮತ್ತು ಮಧ್ಯವಯಸ್ಕ ಮಹಿಳೆ ಕೂಡ ಕಾರಿನಲ್ಲಿದ್ದರು. ನಾಲ್ವರೂ ವಡೋದರಾ ನಗರದ ಮಂಜಲ್ಪುರ ಪ್ರದೇಶಕ್ಕೆ ಸೇರಿದವರಾಗಿದ್ದು, ವೈಯಕ್ತಿಕ ಕೆಲಸದ ಮೇಲೆ ಅಹಮದಾಬಾದಿಗೆ ಬಂದಿದ್ದರು.