ವನ್ಸದಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಾಕತ್ತಿದ್ದರೆ ಗುಜರಾತ್‌ನ ಸಣ್ಣ ಚಹಾ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲಿ. ಗುಜರಾತ್‌ನಿಂದಲೇ ಚುನಾವಣೆಗೆ ಸ್ಪರ್ಧಿಸಿ ತೋರಿಸಲಿ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದರು.
ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬೃಹತ್ ಪ್ರತಿಮೆ ಸ್ಥಾಪಿಸಲೂ ಕಾಂಗ್ರೆಸ್ಸಿನವರು ವಿರೋಧಿಸಿದ್ದರು ಎಂದು ಆರೋಪಿಸಿದರು.#
ಅಸ್ಸಾಂನಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ಮಿಕರ ಕೂಲಿ ಹೆಚ್ಚಿಸಲಿದ್ದು, ಗುಜರಾತ್ ಮೂಲದ ಚಹಾ ತೋಟದ ಮಾಲೀಕರು ಭರಿಸುವಂತೆ ಮಾಡುತ್ತೇನೆ ಎಂದಿದ್ದರು ಎಂಬುದನ್ನು ಉಲ್ಲೇಖಿಸಿ ಇರಾನಿ ಮಾತು ಹೇಳಿದರು.
ರಾಹುಲ್ ಗಾಂಧಿಗೆ ತಾಕತ್ತಿದ್ದರೆ ಈ ಬಗ್ಗೆ ಕ್ರಮಕ್ಕೆ ಮುಂದಾಗಲಿ. ಗುಜರಾತ್‌ನಿಂದಲೇ ಸ್ಪರ್ಧೆ ಮಾಡುವಂತೆಯೂ ನಾನು ಸವಾಲು ಹಾಕುತ್ತೇನೆ. ಅದು, ಎಲ್ಲ ಗೊಂದಲವನ್ನು ಬಗೆಹರಿಸಲಿದೆ ಎಂದು ಅಭಿಪ್ರಾಯಪಟ್ಟರು.