Thursday, 19th September 2024

ಗೋಲ್ಡನ್ ಟೆಂಪಲ್‌ಗೆ ರಾಹುಲ್ ಗಾಂಧಿ ಭೇಟಿ

ಚಂಡೀಗಢ: ಜಲಂಧರ್‌ನಲ್ಲಿ ನಡೆಯಲಿರುವ ವರ್ಚುವಲ್ ರ್‍ಯಾಲಿಗೂ ಮುನ್ನ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದರು.

ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಜೊತೆಯಾಗಿ ರಾಹುಲ್ ಗಾಂಧಿ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದರು.

ಜಲಂಧರ್‌ನ ಮಿಥಾಪುರ್‌ನಲ್ಲಿ, ರಾಹುಲ್‌ ಗಾಂಧಿ ಸಂಜೆ ದೆಹಲಿಗೆ ಹಿಂದಿರುಗುವ ಮೊದಲು “ಪಂಜಾಬ್ ಫತೇ” ವರ್ಚುವಲ್‌ ರ್‍ಯಾಲಿಯನ್ನುದ್ದೇಶಿಸಿ ಮಾತನಾಡ ಲಿದ್ದಾರೆ. ‘ಹರ್ಮಂದಿರ್ ಸಾಹಿಬ್ ಎಲ್ಲರ ಹೃದಯದಲ್ಲಿದ್ದಾರೆ’ ಎಂದು ರಾಹುಲ್‌ ಗಾಂಧಿ ಬರೆದುಕೊಂಡಿದ್ದಾರೆ.