Sunday, 8th September 2024

ಜಾಮೀನು ಅರ್ಜಿ ವಜಾ: ರಿಯಾಗೆ ಜೈಲೇ ಗತಿ

*ಸೆ.22ರವರೆಗೂ ನಟಿ ರಿಯಾಗೆ ಜೈಲೇ ಗತಿ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಹತ್ಯೆ ಕುರಿತಂತೆ ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯವರಿಗೆ ಜೈಲೇ ಗತಿಯಾಗಿದೆ.

ಜಾಮೀನು ಅರ್ಜಿಯ ವಿಚಾರಣೆ ನಡಸಿದ ಮುಂಬೈ ಸೆಷನ್ ಕೋರ್ಟ್ ಇದೇ ತಿಂಗಳ 22ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ. ರಿಯಾ ಸೇರಿ ಆರು ಮಂದಿ ಸಲ್ಲಿಸಿದ್ದ ಬೇಲ್ ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಜೈಲುವಾಸವೇ ಗತಿಯಾಗಿದೆ. ಡ್ರಗ್ ಪ್ರಕರಣದಲ್ಲಿ ನಟಿ ರಿಯಾ ಅವರ ಬಂಧನವಾಗಿತ್ತು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂಧಿತರಾದ ರಿಯಾ, ಸೌಹಿಕ್ ಅವರಲ್ಲದೇ ಈ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ)ಯಿಂದ ಈಗಾಗಲೇ ಬಂಧಿತರಾಗಿರುವ ಇತರ ನಾಲ್ವರ ಜಾಮೀನು ಅರ್ಜಿಗಳನ್ನೂ ಸಹ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ತಿರಸ್ಕರಿಸಿದರು.

ರಿಯಾ ಚಕ್ರವರ್ತಿ ಈಗ ಮುಂಬೈನ ಬೈಕುಲಾ ಜೂಲಿನ ಮಹಿಳಾ ಬ್ಯಾರಕ್‍ನಲ್ಲಿ ನ್ಯಾಯಾಂಗ ಕಸ್ಟಡಿ ಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ಧಾರೆ.

Leave a Reply

Your email address will not be published. Required fields are marked *

error: Content is protected !!