ಕರ್ನಾಲ್ (ಹರ್ಯಾಣ): ರೈಸ್ ಮಿಲ್ ಕಟ್ಟಡ ಕುಸಿದು ನಾಲ್ವರು ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ಕರ್ನಾಲ್ ನಗರದಲ್ಲಿ ನಡೆದಿದೆ.
ಏಕಾಏಕಿ 3 ಹಂತಸ್ತಿನ ಕಟ್ಟಡ ಕುಸಿದಿದ್ದು ಅಕ್ಕ ಪಕ್ಕದ ಕಟಡಕ್ಕೂ ಹಾನಿಯಾಗಿದೆ. ತಡರಾತ್ರಿವರೆಗೂ ಕೆಲಸ ಮಾಡುವ ಹಲವು ಕಾರ್ಮಿಕರು ಅಕ್ಕಿ ಗಿರಣಿಯಲ್ಲಿ ಮಲಗು ತ್ತಿದ್ದರು. ಕಟ್ಟಡ ಕುಸಿದಿರುವುದರಿಂದ ಅವಶೇಷಗಳಡಿಯಲ್ಲಿ ಹಲವು ಕಾರ್ಮಿಕರು ಹೂತು ಹೋಗಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದಾರೆ.
ನಾಲ್ವರ ಶವ ಪತ್ತೆಯಾಗಿದೆ, ಇನ್ನುಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ರಾತ್ರಿ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.