Monday, 25th November 2024

Richest Indian: ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮತ್ತೊಮ್ಮೆ ಮುಖೇಶ್ ಅಂಬಾನಿಗೆ ಅಗ್ರ ಸ್ಥಾನ; ಸಂಪತ್ತು ಎಷ್ಟು ಏರಿದೆ?

Richest Indian

ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಅವರು 2024ರ ಫೋರ್ಬ್ಸ್‌ ಪಟ್ಟಿಯಲ್ಲಿ (Forbes List) ಮತ್ತೊಮ್ಮೆ ಭಾರತದ ಶ್ರೀಮಂತ (Richest Indian) ವ್ಯಕ್ತಿಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರ ಆದಾಯದ ನಿವ್ವಳ ಮೌಲ್ಯ 119.5 ಶತಕೋಟಿ ಡಾಲರ್ ಆಗಿದೆ. ಭಾರತದ ನೂರು ಶ್ರೀಮಂತರ ಒಟ್ಟು ಸಂಪತ್ತು 1.1 ಲಕ್ಷ ಕೋಟಿ ಡಾಲರ್ ಗೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 40ರಷ್ಟು ಹೆಚ್ಚಳವಾಗಿರುವುದಾಗಿ ಫೋರ್ಬ್ಸ್‌ ವರದಿ ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಫೋರ್ಬ್ಸ್‌ನ 2024 ರ ಭಾರತದ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ ರಿಲಯನ್ಸ್ ಷೇರುದಾರರಿಗೆ ದೀಪಾವಳಿ ಉಡುಗೊರೆಯಾಗಿ ಬೋನಸ್ ಷೇರುಗಳನ್ನು ಘೋಷಿಸಿದ್ದ ಅಂಬಾನಿ ಅವರ ಸಂಪತ್ತಿನಲ್ಲಿ ಗಣನೀಯ ಏರಿಕೆಯಾಗಿದೆ.

ಕಳೆದ ವರ್ಷದಲ್ಲಿ ಅವರ ಸಂಪತ್ತು 27.5 ಶತಕೋಟಿ ಡಾಲರ್ ಗಳಷ್ಟು ಅಂದರೆ ಭಾರತೀಯ ರೂಪಾಯಿ 23,088 ಕೋಟಿ ರೂ. ಹೆಚ್ಚಾಗಿದೆ. ಈ ಮೂಲಕ ಅವರ ಒಟ್ಟು ನಿವ್ವಳ ಮೌಲ್ಯ 119.5 ಶತಕೋಟಿ ಡಾಲರ್ ಆಗಿದೆ. ಈ ಮೂಲಕ ವಿಶ್ವದ 13ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

Richest Indian

ಮುಖೇಶ್ ಅಂಬಾನಿಯವರ ಬಳಿಕ 116 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ. ಸಾವಿತ್ರಿ ಜಿಂದಾಲ್ ಮೂರನೇ ಸ್ಥಾನದಲ್ಲಿದ್ದು, 43.7 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. ಬಳಿಕ ಶಿವ ನಾಡರ್ 40.2 ಶತಕೋಟಿ ಡಾಲರ್ ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ದಿಲೀಪ್ ಸಂಘ್ವಿ 32.4 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ರಾಧಾ ಕಿಶನ್ ದಮಾನಿ 31.5 ಬಿಲಿಯನ್ ಡಾಲರ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಸುನಿಲ್ ಮಿತ್ತಲ್ 30.7 ಶತಕೋಟಿ ಡಾಲರ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಕುಮಾರ್ ಬಿರ್ಲಾ 24.8 ಶತಕೋಟಿ ಡಾಲರ್‌ಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಸೈರಸ್ ಪೂನಾವಾಲಾ 24.5 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದು, ಒಂಬತ್ತನೇ ಸ್ಥಾನದಲ್ಲಿದ್ದರೆ, ಬಜಾಜ್ ಕುಟುಂಬವು 23.4 ಶತಕೋಟಿ ಡಾಲರ್‌ನೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ.

ಭಾರತೀಯ ಉದ್ಯಮಿಗಳ ಸಂಪತ್ತು ಏಕೆ ಹೆಚ್ಚಾಯಿತು?

ಭಾರತದ ಅಗ್ರ 100 ಬಿಲಿಯನೇರ್‌ಗಳ ಸಂಪತ್ತು 2023ರಲ್ಲಿ 799 ಶತಕೋಟಿ ಡಾಲರ್‌ನಿಂದ 2024ರಲ್ಲಿ1.1 ಲಕ್ಷ ಶತಕೋಟಿ ಹೆಚ್ಚಳವಾಗಿದ್ದು, ಶೇ. 40ರಷ್ಟು ಏರಿಕೆಯಾಗಿದೆ ಎಂದು ಫೋರ್ಬ್ಸ್ ಗಮನಿಸಿದೆ. ಈ ಹೆಚ್ಚಳವು ಸ್ಟಾಕ್ ಮಾರುಕಟ್ಟೆ, ಐಪಿಒ ಮತ್ತು ಮ್ಯೂಚುಯಲ್ ಫಂಡ್‌ಗಳಿಂದ ಆಗಿದೆ. ಕಳೆದ ವರ್ಷದಲ್ಲಿ ಬಿಎಸ್ಇ ಸೆನ್ಸೆಕ್ಸ್ ಶೇ. 30ರಷ್ಟು ಏರಿಕೆಯಾಗಿದೆ.

Ratan Tata Death: ಪರೋಪಕಾರ ಕಲಿತಿದ್ದೇ ಟಾಟಾ ಕುಟುಂಬದಿಂದ; ಸುಧಾ ಮೂರ್ತಿ ಭಾವುಕ ನುಡಿ

58 ವ್ಯಕ್ತಿಗಳು ತಮ್ಮ ಸಂಪತ್ತಿಗೆ 1 ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಸೇರಿಸಿಕೊಂಡಿದ್ದಾರೆ. ಶೇ. 80ರಷ್ಟು ಮಂದಿಯ ಸಂಪತ್ತಿನಲ್ಲಿ ಹೆಚ್ಚಳವಾಗಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.