Friday, 22nd November 2024

Richest Television Star: ಕಿರುತೆರೆ ಶ್ರೀಮಂತ ಸ್ಟಾರ್‌ ಇವರೇ! ಈ ಸೆಲೆಬ್ರಿಟಿಯ ಆದಾಯ ಕೇಳಿದ್ರೆ ಶಾಕ್‌ ಆಗ್ತೀರಾ

richest TV celebrity

ನವದೆಹಲಿ: ಭಾರತೀಯ ಕಿರುತೆರೆಯಲ್ಲಿ ಅಸಂಖ್ಯಾತ ಪ್ರತಿಭಾನ್ವಿತ ಸ್ಟಾರ್‌ಗಳನ್ನು ಹೊಂದಿದೆ. ದಿನಕ್ಕೊಂದು ಪ್ರತಿಭಾನ್ವಿತರು ಕಿರುತೆರೆ ಮೂಲಕ ಮನೋರಂಜನಾ ಜಗತ್ತಿಗೆ ಪರಿಚಯವಾಗುತ್ತಲೇ ಇರುತ್ತಾರೆ. ಅವರಲ್ಲಿ ಅನೇಕರು ಯಶಸ್ವಿ ವೃತ್ತಿ ಬದುಕು ಸಾಗಿತ್ತಿದ್ದಾರೆ. ಅಲ್ಲದೇ ಸಿನಿಮಾ ನಟರಿಗೆ ಸರಿಸಮಾನರಾಗಿ ಸಂಪಾದನೆ ಮಾಡುತ್ತಿದ್ದಾರೆ. ಹಾಗಿದ್ದರೆ ಕಿರುತೆರೆಯಲ್ಲಿ ಅತ್ಯಂತ ಶ್ರೀಮಂತ ಸ್ಟಾರ್‌(Richest Television Star) ಯಾರು? ಅವರ ನಿವ್ವಳ ಆದಾಯ ಎಷ್ಟಿದೆ? ಇಲ್ಲಿ ಸವಿಸ್ತಾರವಾದ ವರದಿ(Kapil Sharma).

ಇತ್ತೀಚಿನ ವರದಿಗಳು ಒಬ್ಬ ಜನಪ್ರಿಯ ಟಿವಿ ಸ್ಟಾರ್‌ ಇತರರನ್ನು ಹಿಂದಿಕ್ಕಿ ಶ್ರೀಮಂತ ಭಾರತೀಯ ಕಿರುತೆರೆ ತಾರೆಯಾಗಿ ಹೊರಹೊಮ್ಮಿದ್ದಾರೆ. ಅದು ಹಿರಿಯ ನಟಿ ರೂಪಾಲಿ ಗಂಗೂಲಿ, ತೇಜಸ್ವಿ ಪ್ರಕಾಶ್ ಅಥವಾ ಕರಣ್ ಕುಂದ್ರಾ ಅಲ್ಲವೆ ಅಲ್ಲ. ಅದು ಬೇರೆ ಯಾರೂ ಅಲ್ಲ, ಒನ್‌ ಆಂಡ್‌ ಓನ್ಲಿ ಕಪಿಲ್‌ ಶರ್ಮಾ.

ಹಲವಾರು ವರದಿಗಳ ಪ್ರಕಾರ, ಹಾಸ್ಯನಟ ಕಪಿಲ್ ಶರ್ಮಾ ಶ್ರೀಮಂತ ಟಿವಿ ತಾರೆಯಾಗಿ ಹೊರಹೊಮ್ಮಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಕಾರ್ಯಕ್ರಮಕ್ಕಾಗಿ ಕಪಿಲ್ ಪ್ರತಿ ಎಪಿಸೋಡ್‌ಗೆ ₹ 5 ಕೋಟಿ ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ. ಆಮೂಲಕ ಅವರ ನಿವ್ವಳ ಮೌಲ್ಯ ₹300 ಕೋಟಿ ಎಂದು ಅಂದಾಜಿಸಲಾಗಿದೆ.

ಅವರು ಅಂಧೇರಿಯಲ್ಲಿ ₹ 15 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದು, ಅಲ್ಲಿ ಅವರು ತಮ್ಮ ತಾಯಿ, ಪತ್ನಿ ಗಿನ್ನಿ ಚತ್ರತ್ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. 2024 ರ ಟಾಪ್ ಸೆಲೆಬ್ರಿಟಿ ತೆರಿಗೆದಾರರ ಪಟ್ಟಿಯಲ್ಲಿ, ಕಪಿಲ್ ಶರ್ಮಾ ಹೆಸರಿತ್ತು. ಕಪಿಲ್ ಶರ್ಮಾ 2024 ಸಾಲಿನಲ್ಲಿ ₹26 ಕೋಟಿ ಮೌಲ್ಯದ ತೆರಿಗೆ ಪಾವತಿಸಿದ್ದಾರೆ ಎನ್ನಲಾಗಿದೆ. ಇನ್ನು ನಟ ಸುನಿಲ್ ಗ್ರೋವರ್‌ ಕೂಡ ಹೆಚ್ಚು ಆದಾಯ ಗಳಿಸುತ್ತಿದ್ದಾರೆ ಎನ್ನಲಾಗಿದೆ. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಅವರು ಪ್ರತಿ ಸಂಚಿಕೆಗೆ ₹ 25 ಲಕ್ಷ ರೂ. ಸಂಭಾವಣೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಕಪಿಲ್ ಶರ್ಮಾ ಹಿನ್ನೆಲೆ

2007 ರಲ್ಲಿ ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಸೀಸನ್ 3 ಗೆದ್ದ ನಂತರ ಕಪಿಲ್ ಕಿರುತೆರೆ ಬದುಕಿಗೆ ಕಾಲಿಟ್ಟಿದ್ದರು. 2013 ರಲ್ಲಿ ಅವರು ರಿಯಾಲಿಟಿ ಶೋ ಕಾಮಿಡಿ ನೈಟ್ಸ್ ವಿತ್ ಕಪಿಲ್ ಮತ್ತು ನಂತರ 2016 ರಿಂದ 2023 ರವರೆಗೆ ದಿ ಕಪಿಲ್ ಶರ್ಮಾ ಶೋ ಅನ್ನು ಹೋಸ್ಟ್ ಮಾಡಿದ್ದರು. ಈ ಎರಡೂ ಶೋಗಳು ಕಪಿಲ್‌ ಶರ್ಮಾ ವೃತ್ತಿ ಬದುಕಿಗೆ ಬಹುದೊಡ್ಡ ಮಟ್ಟದಲ್ಲಿ ಬಲ ತುಂಬಿತ್ತು. ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ ನಡೆಸಿಕೊಡುತ್ತಿದ್ದಾರೆ.

ಯಶಸ್ಸಿನ ಬೆಂಬಿಡದ ವಿವಾದಗಳು

ಇನ್ನು ಯಶಸ್ಸಿ ಜತೆ ಜತೆಗೆ ಹಲವು ವಿವಾದಗಳೂ ಕಪಿಲ್‌ ಬೆನ್ನು ಬಿದ್ದಿದ್ದವು. 2016 ರಲ್ಲಿ, ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್‌ ಮಾಡುವ ಮೂಲಕ ಟ್ವೀಟ್ ಮಾಡಿ, ಭ್ರಷ್ಟಾಚಾರದ ಬಗ್ಗೆ ದೂರು ನೀಡಿದ್ದರು. ಇದಾದ ನಂತರ ಅವರು ಸುನಿಲ್ ಗ್ರೋವರ್ ಅವರೊಂದಿಗೆ ಸಾರ್ವಜನಿಕವಾಗಿ ಜಗಳವಾಡಿದರು ಮತ್ತು IIFM (ಅಂತರರಾಷ್ಟ್ರೀಯ ಮರಾಠಿ ಚಲನಚಿತ್ರೋತ್ಸವ) ಪ್ರಶಸ್ತಿಗಳು 2015 ರಲ್ಲಿ ಮೊನಾಲಿ ಠಾಕೂರ್, ತನಿಶಾ ಮುಖರ್ಜಿ ಮತ್ತು ಇತರ ಮಹಿಳಾ ಅತಿಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಯಿತು.

ಈ ಸುದ್ದಿಯನ್ನೂ ಓದಿ:Highest Tax-Paying Celebs: ಇವರೇ ಅತೀ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳು; ಸಂಪೂರ್ಣ ಪಟ್ಟಿ ಇಲ್ಲಿದೆ