Sunday, 15th December 2024

ರವೀಂದ್ರ ಜಡೇಜಾ ಪತ್ನಿಗೆ ಮುನ್ನಡೆ

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆರಂಭಿಕ ಹಂತದಲ್ಲಿ ಹಿನ್ನಡೆ ಯಲ್ಲಿದ್ದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಇದೀಗ ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಿವಾಬ ತನ್ನ ಸಮೀಪದ ಅಭ್ಯರ್ಥಿಗಿಂತ 14,905 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಿಪೇಂದ್ರ ಸಿನ್ಹಾ ಜಡೇಜಾ ಮತ್ತು ಎಎಪಿಯಿಂದ ಅಹಿರ್ ಕರ್ಶನ್ಭಾಯ್ ಪರ್ಬತ್ಭಾಯ್ ಕರ್ಮೂರ್ ಕಣದಲ್ಲಿ ದ್ದಾರೆ.
ಎಎಪಿ ಅಭ್ಯರ್ಥಿ 7,235 ಮತಗಳಿಂದ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 5,288 ಮತಗಳೊಂದಿಗೆ ಮೂರನೇ ಸ್ಥಾನ ದಲ್ಲಿದ್ದಾರೆ. ಹೊಸ ಮಾಹಿತಿ ಪ್ರಕಾರ 182 ಸ್ಥಾನಗಳ ಪೈಕಿ ಬಿಜೆಪಿ 148 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.