Friday, 22nd November 2024

Road Accident: ಜವರಾಯನ ಅಟ್ಟಹಾಸ! ಬಸ್‌-ಟೆಂಪೋ ಡಿಕ್ಕಿ; ಎಂಟು ಮಕ್ಕಳು ಸೇರಿ 11 ಜನ ಬಲಿ

accident

ಜೈಪುರ: ಬಸ್‌ ಮತ್ತು ಟೆಂಪೋ ರಿಕ್ಷಾ ನಡುವಿನ ಭೀಕರ ಅಪಘಾತ (Road Accident)ದಲ್ಲಿ ಮಕ್ಕಳು ಸೇರಿದಂತೆ ಬರೋಬ್ಬರಿ 12 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಧೋಲ್‌ಪುರದಲ್ಲಿ ನಡೆದಿದೆ. ಸುನಿಪುರ್‌ ಗ್ರಾಮದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ಗೆ ಟೆಂಪೋ ಡಿಕ್ಕಿ ಹೊಡೆದಿದ್ದು, ಎಂಟು ಮಕ್ಕಳು ಸೇರಿದಂತೆ 11ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಂತ್ರಸ್ತರು ಬರೌಲಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೃತರಲ್ಲಿ ಐವರು ಮಕ್ಕಳು, ಮೂವರು ಹುಡುಗಿಯರು, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಟೆಂಪೋ ಪ್ರಯಾಣಿಕರು ಬಾರಿ ನಗರದ ಗುಮತ್ ಮೊಹಲ್ಲಾ ನಿವಾಸಿಗಳು. ಪೊಲೀಸರು ಎಲ್ಲಾ ಶವಗಳನ್ನು ಬರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.

ಬರಿ ಸಿಟಿಯ ಕರೀಂ ಕಾಲೋನಿ ಗುಮಾತ್ ಮೊಹಲ್ಲಾದ ಕುಟುಂಬವು ಬರೌಲಿ ಗ್ರಾಮದಲ್ಲಿನ ಸಂಬಂಧಿಕರ ಮನೆಯಲ್ಲಿ ನಡೆದ ‘ಭಾತ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿತ್ತು ಎಂದು ಬಾರಿ ಕೊತ್ವಾಲಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಿವ ಲಹರಿ ಮೀನಾ ತಿಳಿಸಿದ್ದಾರೆ.

“ರಾತ್ರಿ 11 ಗಂಟೆ ಸುಮಾರಿಗೆ ಸುನಿಪುರ್ ಗ್ರಾಮದ ಬಳಿ ಹೆದ್ದಾರಿಯಲ್ಲಿ ಸ್ಲೀಪರ್ ಕೋಚ್ ಬಸ್ ಅವರು ಪ್ರಯಾಣಿಸುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದು 11 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ನಾವು ಟೆಂಪೋ ಮತ್ತು ಬಸ್ ಅನ್ನು ವಶಕ್ಕೆ ಪಡೆದಿದ್ದೇವೆ. ಇನ್ನು ಈ ಅಪಘಾತಕ್ಕೆ ಕಾರಣ ಏನೆಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಕೆಲವು ದಿನಗಳ ಹಿಂದೆ ಉತ್ತರಾಖಂಡದಲ್ಲೂ ಇಂತಹದ್ದೇ ಒಂದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಶುಕ್ರವಾರ (ಅಕ್ಟೋಬರ್‌ 4) ರಾತ್ರಿ ಮದುವೆ ದಿಬ್ಬಣ ಹೊರಟಿದ್ದ ಬಸ್ 200 ಅಡಿ ಆಳದ ಕಮರಿಗೆ ಬಿದ್ದು ಸುಮಾರು 30 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ಬಿರೋನ್‌ಖಾಲ್‌ ಗ್ರಾಮದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಬಸ್‌ ಕಮರಿಗೆ ಉರುಳಿ ಬಿದ್ದು ಅಪಘಾತ ಸಂಭವಿಸಿದೆʼʼ ಎಂದು ಮೂಲಗಳು ತಿಳಿಸಿದೆ. ರಾತ್ರಿ 8 ಗಂಟೆ ಸುಮಾರಿಗೆ ಸಿಮಂಡಿ ಗ್ರಾಮದ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಆಳವಾದ ಕಮರಿಗೆ ಬಿದ್ದಿದೆ. ಈ ವೇಳೆ ಬಸ್‌ನಲ್ಲಿ ಒಟ್ಟು 40-50 ಪ್ರಯಾಣಿಕರಿದ್ದರು

ಇನ್ನೇನು 2 ಕಿ.ಮೀ. ಕ್ರಮಿಸಿದ್ದರೆ ಅತಿಥಿಗಳು ವಧುವಿನ ಮನೆ ತಲುಪುತ್ತಿದ್ದರು. ಆದರೆ ಅದಕ್ಕೂ ಮುನ್ನ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ʼʼವಧುವಿನ ಮನೆಯಿಂದ 2 ಕಿ.ಮೀ. ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿದ್ದವರು ತಮ್ಮ ಜೀವವನ್ನು ಉಳಿಸಲು ಕಿರುಚಲು ಪ್ರಾರಂಭಿಸಿದರು. ಸ್ಥಳೀಯರು ಕೂಡಲೇ ಅವರ ರಕ್ಷಣೆಗೆ ಧಾವಿಸಿದರು. ರಾತ್ರಿಯಾದ್ದರಿಂದ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದಿದ್ದುದೂ ಕಾರ್ಯಾಚರಣೆಗೆ ಅಡ್ಡಿಯಾಗಿತ್ತುʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Fire Accident: ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ; ಓರ್ವ ರೋಗಿ ಸಾವು