ರಸ್ತೆ ದುರಸ್ಥಿ ಮತ್ತು ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನಿರ್ದೇಶನ ನೀಡಿದೆ.
ನಶ್ರಿಯಿಂದ ನವಯುಗ ಸುರಂಗ ಮಾರ್ಗದ ನಡುವಿನ ರಾಷ್ಟ್ರೀಯ ಹೆದ್ದಾರಿ-44 ರ ದುರಸ್ಥಿ ಕಾಮಗಾರಿ ಕೆಲಸವು ಫೆಬ್ರುವರಿ 24 ರ ಬೆಳಿಗ್ಗೆ 6 ರಿಂದ ಪ್ರಾರಂಭಗೊಂಡು ಮರುದಿನ ಬೆಳಿಗ್ಗೆ 6 ರವರೆಗೆ ನಡೆಯಲಿದೆ. ಈ ವೇಳೆ ವೈದ್ಯಕೀಯ ತುರ್ತು ವಾಹನವನ್ನು ಹೊರತು ಪಡಿಸಿ ಲಘು ಮೋಟಾರು ವಾಹನಗಳು ಮತ್ತು ಭಾರೀ ಮೋಟಾರು ವಾಹನಗಳ ಸಂಚಾರ ವನ್ನು ನಿಷೇಧಿಸಿ ಆ ದಿನವನ್ನು ಸಂಚಾರ ರಹಿತ ದಿನ ಎಂದು ಘೋಷಿಸಲಾಗಿದೆ.
ಇದೇ ರೀತಿ, ಮಾರ್ಚ್ 3 ಮತ್ತು ಮಾರ್ಚ್ 10 ರಂದು ರಾಷ್ಟ್ರೀಯ ಹೆದ್ದಾರಿ-44 ಸಂಚಾರ ರಹಿತ ದಿನ ಇರಲಿದೆ.