Saturday, 23rd November 2024

ಅಟಾರ್ನಿ ಜನರಲ್ ಆಗಿ ರೋಹಟಗಿ ಪುನರ್ ಆಯ್ಕೆ

ನವದೆಹಲಿ: ಹಿರಿಯ ವಕೀಲ ಮುಕುಲ್ ರೋಹಟಗಿ ಭಾರತದ ಅಟಾರ್ನಿ ಜನರಲ್ ಆಗಿ ಪುನರ್ ಆಯ್ಕೆಯಾಗಿದ್ದಾರೆ.

ರೋಹಟಗಿ ಅವರು ಅಕ್ಟೋಬರ್ 1 ರಿಂದ ಭಾರತದ ಉನ್ನತ ಕಾನೂನು ಅಧಿಕಾರಿಯಾಗಿ ತಮ್ಮ ಎರಡನೇ ಅವಧಿಯ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಅಧಿಕಾರದಲ್ಲಿರೋ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವಧಿ ಸೆ.30ಕ್ಕೆ ಅಂತ್ಯವಾಗಲಿದೆ.

ಹಿರಿಯ ವಕೀಲರಾದ ವೇಣುಗೋಪಾಲ್ ಅವರು ಜೂನ್ 30, 2017 ರಂದು ಅಟರ್ನಿ ಜನರಲ್ ಆಗಿ ನೇಮಕಗೊಂಡಿದ್ದರು. ಇನ್ನು ರೋಹಟಗಿ ಅವರು ಹಿರಿಯ ವಕೀಲರಾಗಿ ದ್ದಾರೆ. ಅಲ್ಲದೇ ಅಟಾರ್ನಿ ಜನರಲ್ ಹುದ್ದೆ ಒಪ್ಪಿಕೊಳ್ಳಲು ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಸರ್ಕಾರ ಈ ವರ್ಷದ ಜೂನ್‌ನಲ್ಲಿ ವೇಣುಗೋಪಾಲ್ ಅವರ ಅಧಿಕಾರಾ ವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಿತು. ಅಲ್ಲದೇ ಮತ್ತೆ ಮೂರು ತಿಂಗಳುಗಳ ಕಾಲ ಕಾರ್ಯ ನಿರ್ವಹಿಸುವಂತೆ ಕೇಳಿಕೊಂಡಿತ್ತು. ಹೊಸ ವ್ಯಕ್ತಿಯೊಬ್ಬರು ಸಿಗುವವ ರೆಗೂ ಹುದ್ದೆಯಲ್ಲಿ ಇರೋದಾಗಿ ಒಪ್ಪಿಕೊಂಡೊದ್ದರು. ಇದೀಗ ಹೊಸ ನೇಮಕಾತಿ ಯಾಗಿದ್ದು ವೇಣುಗೋಪಾಲ್ ಅವರು ಈ ತಿಂಗಳ ಅಂತ್ಯದ ವೆರೆಗೂ ಕಾರ್ಯ ನಿರ್ವಹಿಸಲಿದ್ದು, ಅಕ್ಟೋಬರ್ 1ರಿಂದ 67 ವರ್ಷದ ಹಿರಿಯ ವಕೀಲರಾದ ರೋಹಟಗಿ ಕಾರ್ಯಭಾರ ಮುಂದುವರಿಸಲಿದ್ದಾರೆ.