Thursday, 12th December 2024

ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಅವಘಡ, 56 ಗುಡಿಸಲುಗಳು ಭಸ್ಮ

ನವದೆಹಲಿ: ದೆಹಲಿಯ ಕಾಳಿಂದಿ ಕುಂಜ್ ಮೆಟ್ರೊ ನಿಲ್ದಾಣದ ಬಳಿ ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಅವಘಡ ಸಂಭವಿಸಿ, 56 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ.

ಶನಿವಾರ ರಾತ್ರಿ 11.55ಕ್ಕೆಐದು ಅಗ್ನಿಶಾಮಕ ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಯಿತು. ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಯನ್ನು ನಿಯಂತ್ರಣಕ್ಕೆ ತರಲಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ’ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ ದರು. ‘ರೋಹಿಂಗ್ಯಾ ನಿರಾಶ್ರಿತರ 270 ಕುಟುಂಬಗಳ ಪೈಕಿ 56 ಕುಟುಂಬಗಳ ಗುಡಿಸಲುಗಳು ಸುಟ್ಟು ಹೋಗಿವೆ.