ಖಚಿತ ಸುಳಿವಿನ ಮೇರೆಗೆ ಬಿಎಸ್‌ಎಫ್ ಯೋಧರು ಜಿತುರ್ದಿಘಿಪರ್ ಎಂಬಲ್ಲಿನ ಚೆಕ್ಕಿಂಗ್ ಗೇಟ್ ನಲ್ಲಿ ಮೂರು ಕಾರುಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ರೋಹಿಂಗ್ಯ ನುಸುಳುಕೋರರು ಪ್ರಯಾಣಿಸುತ್ತಿದ್ದ ಬಗ್ಗೆ ಪತ್ತೆಯಾಗಿದೆ.
ಬಳಿಕ ರೋಹಿಂಗ್ಯಾ ವಲಸಿಗರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಕೈಲಾಶಹರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ವಿಚಾರಣೆ ವೇಳೆ ವಿಶ್ವಸಂಸ್ಥೆ ನೀಡಿದ ನಿರಾಶ್ರಿತರ ಚೀಟಿಯನ್ನು ಮೂವರು ತೋರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈ ಮುಂಚೆಯೂ ಏಪ್ರಿಲ್ 28 ರಂದು ಧರ್ಮನಗರ ರೈಲು ನಿಲ್ದಾಣದ ಬಳಿ ಆರು ರೋಹಿಂಗ್ಯಾ ವಲಸಿಗರನ್ನು ಬಂಧಿಸಲಾಗಿತ್ತು.