ಬೆಂಗಳೂರು: ಪದವಿ, ದ್ವಿತೀಯ ಪಿಯುಸಿ, 10ನೇ ತರಗತಿ ಮುಗಿಸಿ ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರಿಗಾಗಿ ಭಾರತೀಯ ರೈಲ್ವೆ ಇಲಾಖೆ ಅತ್ಯುತ್ತಮ ಅವಕಾಶ ಒದಗಿಸಿದೆ. ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ (Railway Recruitment Board) ಖಾಲಿ ಇರುವ ಬರೋಬ್ಬರಿ 14,298 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (RRB Recruitment 2024). ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್, ಟೆಕ್ನಿಷಿಯನ್ III ಹುದ್ದೆ ಇದಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಬಹುದು. ಅರ್ಜಿ ಸಲ್ಲಿಕೆ ಅಕ್ಟೋಬರ್ 2ರಂದು ಆರಂಭವಾಗಲಿದ್ದು, ಕೊನೆಯ ದಿನ ಅಕ್ಟೋಬರ್ 16. ಉದ್ಯೋಗ ಸ್ಥಳ: ಭಾರತಾದ್ಯಂತ (Job Guide).
ಹುದ್ದೆಗಳ ವಿವರ
ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್ (ಓಪನ್ ಲೈನ್) – 1,092 ಹುದ್ದೆ, ವಿದ್ಯಾರ್ಹತೆ: ಬಿ.ಎಸ್ಸಿ, ಬಿಇ/ಬಿ.ಟೆಕ್
ಟೆಕ್ನಿಷಿಯನ್ ಗ್ರೇಡ್ III (ಓಪನ್ ಲೈನ್) 8,052 ಹುದ್ದೆ, ವಿದ್ಯಾರ್ಹತೆ: 10, 12ನೇ ತರಗತಿ, ಐಟಿಐ ತೇರ್ಗಡೆ
ಟೆಕ್ನಿಷಿಯನ್ ಗ್ರೇಡ್ III (ವರ್ಕ್ ಶಾಪ್ & ಪಿಯುಗಳು) 5,154 ಹುದ್ದೆ, ವಿದ್ಯಾರ್ಹತೆ: 10, 12ನೇ ತರಗತಿ, ಐಟಿಐ ತೇರ್ಗಡೆ.
ವಲಯವಾರು ಹುದ್ದೆಗಳ ಸಂಖ್ಯೆ
ಅಹಮದಾಬಾದ್ – 1,015, ಅಜ್ಮೀರ್ – 900, ಬೆಂಗಳೂರು – 337, ಭೋಪಾಲ್ – 534, ಭುವನೇಶ್ವರ – 166, ಬಿಲಾಸ್ಪುರ್ – 933, ಚಂಡೀಗಢ – 187, ಚೆನ್ನೈ 2,716, ಗೋರಖ್ಪುರ – 419, ಗುವಾಹಟಿ – 764, ಜಮ್ಮು-ಶ್ರೀನಗರ – 721, ಕೋಲ್ಕತ್ತಾ – 1,098, ಮಾಲ್ಡಾ – 275, ಮುಂಬೈ – 1,883, ಮುಜಾಫರ್ಪುರ – 113, ಪಾಟ್ನಾ – 221, ಪ್ರಯಾಗ್ ರಾಜ್ – 338, ರಾಂಚಿ – 350, ಸಿಕಂದರಾಬಾದ್ – 959, ಸಿಲಿಗುರಿ – 91, ತಿರುವನಂತಪುರಂ – 278 ಹುದ್ದೆಗಳಿವೆ.
ವಯೋಮಿತಿ
ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ ವಯಸ್ಸು 36 ವರ್ಷ, ಟೆಕ್ನಿಷಿಯನ್ III ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 18 ವರ್ಷ, ಗರಿಷ್ಠ ವಯಸ್ಸು 33 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಎಸ್ಸಿ/ಎಸ್ಟಿ/ಮಾಜಿ ಯೋಧರು/ಪಿಡಬ್ಲ್ಯುಬಿಡಿ/ಮಹಿಳೆಯರು/ತೃತೀಯ ಲಿಂಗಿಗಳು/ಇಬಿಎಸ್ ಅಭ್ಯರ್ಥಿಗಳು 250 ರೂ. ಮತ್ತು ಇತರ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್ಲೈನ್.
ಆಯ್ಕೆ ವಿಧಾನ
ಕಂಪ್ಯೂಟರ್ ಆಧಾರಿತ ಟೆಸ್ಟ್, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
RRB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ವೆಬ್ಸೈಟ್ ವಿಳಾಸ https://www.rrbbnc.gov.in/ಗೆ ಭೇಟಿ ನೀಡಿ.
- Click to Submit Online Application ಆಯ್ಕೆ ಕ್ಲಿಕ್ ಮಾಡಿ.
- Apply ಆಪ್ಶನ್ ಮೇಲೆ ಕ್ಲಿಕ್ ಮಾಡಿ.
- Create An Account ಎಂದಿರುವಲ್ಲಿ ಕ್ಲಿಕ್ ಮಾಡಿ.
- ಅಕೌಂಟ್ ರಚಿಸಿ.
- ವೈಯಕ್ತಿಕ, ಶೈಕ್ಷಣಿಕ ಮಾಹಿತಿ ನೀಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಪೂರ್ಣಗೊಂಡ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
ಹೆಚ್ಚಿನ ವಿವರಗಳಿಗೆ: ಹೆಲ್ಪ್ಡೆಸ್ಕ್ ನಂಬರ್: 9592-001-188 & 0172-565-3333ಕ್ಕೆ ಕರೆ ಮಾಡಿ ಅಥವಾ ವೆಬ್ಸೈಟ್: indianrailways.gov.inಗೆ ಭೇಟಿ ನೀಡಿ.
ಈ ಸುದ್ದಿಯನ್ನೂ ಓದಿ: Job Guide: 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ NTPC; ಅಪ್ಲೈ ಮಾಡುವ ವಿಧಾನ ಇಲ್ಲಿದೆ