ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸಾಮಾಜಿಕ ಜಾಲತಾಣ ಖಾತೆಯ ಪೋಫೈಲ್ ಪಿಚ್ಚರ್ಗಳಲ್ಲಿ ಆ.2ರಿಂದ 15ರವರೆಗೆ ತ್ರಿವರ್ಣ ಧ್ವಜ ಹಾಕುವಂತೆ ಪ್ರಧಾನಿ ನರೇದ್ರ ಮೋದಿ ಅವರ ಕರೆಗೆ ಸಂಘ ಪರಿವಾರ ಸ್ಪಂದಿಸಿದೆ.
ಪ್ರತಿಪಕ್ಷಗಳ ತೀವ್ರ ಟೀಕೆ ಹಾಗೂ ಲೇವಡಿಗಳ ಹೊರತಾಗಿಯೂ ಆ.2ರಿಂದ ಈವರೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಟ್ವೀಟರ್ ಪೋಫೈಲ್ ಪಿಚ್ಚರ್ನಲ್ಲಿ ಭಗದ್ ಧ್ವಜವೇ ಉಳಿದಿತ್ತು.
ಸಂಸ್ಥೆಯ ಮುಖ್ಯಸ್ಥ ಮೋಹನ್ ಭಾಗವತ್ ಅವರು ಟ್ವೀಟರ್ ಖಾತೆಯಲ್ಲಿ ತಮ್ಮದೇ ಚಿತ್ರ ಹಾಕಿಕೊಂಡಿದ್ದರು. ಇದನ್ನು ಕಾಂಗ್ರೆಸ್ ಸೇರಿದಂತೆ ಅನೇಕ ಪ್ರತಿಪಕ್ಷಗಳು ಪ್ರಶ್ನಿಸಿದ್ದವು.
ಪ್ರಧಾನಿ ಕರೆಯನ್ನು ಬಿಜೆಪಿಯ ಪೋಷಕ ಸಂಸ್ಥೆಯಾದ ಸಂಘ ಪರಿವಾರವೇ ಪಾಲಿಸು ತ್ತಿಲ್ಲ. ಹರ್ಘರ್ ತಿರಂಗಾ ಅಭಿಯಾನವನ್ನು ವ್ಯಾಪಾರ ಮನೋಭಾವದಿಂದ ಆಚರಣೆ ಮಾಡಲಾಗುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿದ್ದವು.
ಇಂದಿನಿಂದ ಆ.15ರವರೆಗೂ ಹರ್ಘರ್ ತಿರಂಗಾ ಅಭಿಯಾನ ಆರಂಭವಾಗುತ್ತಿದ್ದು, ಆರ್ಎಸ್ಎಸ್ ತನ್ನ ಪ್ರೋಫೈಲ್ ಪಿಚ್ಚರನ್ನು ಬದಲಾವಣೆ ಮಾಡಿ ತ್ರಿವರ್ಣ ಧ್ವಜ ಹಾಕಿಕೊಂಡಿದೆ.
ಸಂಘ ಪರಿವಾರದ ಪ್ರಚಾರ ಘಟಕದ ಸಹ ಸಂಚಾಲಕ ನರೇಂದ್ರ ಠಾಕೂರ್, ಸಂಘ ತನ್ನ ಶಾಖೆಯ ಪ್ರತಿಯೊಂದು ಕಚೇರಿ ಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯವನ್ನು ಸಂಭ್ರಮಿಸಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.