Sunday, 15th December 2024

ಆರ್​ಎಸ್​ಎಸ್​ ನಾಯಕರ ಟ್ವಿಟರ್ ಖಾತೆಯ ಬ್ಲೂಟಿಕ್‌ ಮಾರ್ಕ್ ಮಿಸ್ಸಿಂಗ್‌

ನವದೆಹಲಿ : ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಅಧಿಕೃತ ಖಾತೆಯ ಬ್ಲೂಟಿಕ್ ರದ್ದು ಮಾಡಿ ಸುದ್ದಿಯಾಗಿದ್ದ ಟ್ವಿಟರ್ ಇದೀಗ​ ತನ್ನ ಬಳಕೆದಾರರಾಗಿರುವ ಆರ್​ಎಸ್​ಎಸ್​ ನಾಯಕರ ಖಾತೆಯ ಬ್ಲೂ ವೇರಿಫೈಡ್ ಮಾರ್ಕ್ ಅನ್ನು ತೆಗೆದು ಹಾಕಿದೆ.

ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್, ಜಂಟಿ ಕಾರ್ಯದರ್ಶಿಗಳಾದ ಕೃಷ್ಣ ಗೋಪಾಲ್ ಮತ್ತು ಅರುಣ್ ಕುಮಾರ್, ಆರ್​ಎಸ್​ಎಸ್​ನ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಷಿ ಅಲಿಯಾಸ್ ಭಯ್ಯಾಜಿ, ಮಾಜಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಹಾಗೂ ಆರ್​ಎಸ್​ಎಸ್​ ಸಂಪರ್ಕ ಪ್ರಮುಖ್ ಅನಿರುದ್ಧ ದೇಶಪಾಂಡೆ ಅವರ ಟ್ವಿಟ್ಟರ್​ ಖಾತೆಯ ಬ್ಲೂ ಟಿಕ್​ ಅನ್ನು ಟ್ವಿಟ್ಟರ್​ ರದ್ದುಪಡಿಸಿದೆ.

ಉಪರಾಷ್ಟ್ರಪತಿ ಯವರ ಕಚೇರಿಯಿಂದ ಆಕ್ಷೇಪಣೆಗಳು ವ್ಯಕ್ತವಾದ ಕೆಲವೇ ಗಂಟೆಗಳಲ್ಲಿ ನಾಯ್ಡು ಅವರ ನೀಲಿ ಟಿಕ್ ಅನ್ನು ಪುನಃ ಸ್ಥಾಪಿಸಲಾಯಿತು ಎಂದು ವರದಿಯಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ‘ಪೂರ್ವ ಸೂಚನೆ’ ಇಲ್ಲದೆ ಇದನ್ನು ಏಕೆ ಮಾಡಲಾಗಿದೆ ಎಂದು ಕೇಳಿ ಟ್ವಿಟರ್ ಗೆ ನೋಟಿಸ್ ನೀಡುವ ಸಾಧ್ಯತೆಯಿದೆ.