Saturday, 23rd November 2024

22 ರಂದು ಆರ್‌.ಎಸ್.ಎಸ್ ರ‍್ಯಾಲಿಗೆ ಅನುಮತಿ ಇಲ್ಲ

ಚೆನ್ನೈ: ತಮಿಳುನಾಡಿನ ಮಧುರೈ, ರಾಮನಾಥಪುರಂ ಮತ್ತು ಶಿವಗಂಗೈ ಜಿಲ್ಲೆಗಳಲ್ಲಿ ಇದೇ 22 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ರ‍್ಯಾಲಿ ನಡೆಸಲು ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ಅನುಮತಿ ನಿರಾಕರಿಸಿದೆ.
ಅಕ್ಟೋಬರ್ 22 ರಂದು 11 ಜಿಲ್ಲೆಗಳಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡಿದೆ. ಮಧುರೈ ಸೇರಿದಂತೆ ದಕ್ಷಿಣದ 14 ಜಿಲ್ಲೆಗಳ 20 ಸ್ಥಳಗಳಲ್ಲಿ 22 ರಿಂದ 29ರವರೆಗೂ ಆರ್‌.ಎಸ್.ಎಸ್ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಮಧುರೈ, ತಂಜಾವೂರು, ತಿರುಚ್ಚಿ, ದಿಂಡಿಗಲ್, ತೇಣಿ, ಪುದುಕೊಟ್ಟೈ, ಕರೂರ್, ತಿರುನಲ್ವೇಲಿ, ತೂತುಕುಡಿ, ತೆಂಕಶಿ, ವಿರುಧುನಗರ, ಶಿವಗಂಗೈ, ರಾಮನಾಥಪುರಂ, ಕನ್ಯಾಕುಮಾರಿ ಸೇರಿದಂತೆ 14 ಜಿಲ್ಲೆಗಳಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡುವಂತೆ ಮನವಿಯಲ್ಲಿ ಕೋರಲಾಗಿತ್ತು. ಆದಾಗ್ಯೂ, 11 ಜಿಲ್ಲೆಗಳಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿದ್ದು, ಮೂರು ಜಿಲ್ಲೆಗಳಲ್ಲಿ ಅನುಮತಿ ನಿರಾಕರಿಸಲಾಗಿದೆ.