ನೂತನ ಸೌಲಭ್ಯ ಜಾರಿಗೆ ಬಂದರೆ ವಲಸಿಗರು ತಾವು ವಾಸವಿರುವ ಸ್ಥಳದಿಂದಲೇ ಮತ ದಾನ ಮಾಡಬಹುದು. ಮತದಾನ ಮಾಡಲೆಂದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿ ರುವ ಹುಟ್ಟೂರಿಗೆ ಪ್ರಯಾಣಿಸುವ ಅಗತ್ಯ ಬರುವುದಿಲ್ಲ. ಮತದಾನದಲ್ಲಿ ಸಕ್ರಿಯ ವಾಗಿ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚಿಸುವುದು ಇದರ ಉದ್ದೇಶ. ಇವಿಎಂಗಳ ಮಾದರಿ ಯಲ್ಲಿಯೇ ಆರ್‌ವಿಎಂ ಇರಲಿದೆ. ದೃಢವಾಗಿದ್ದು, ಲೋಪಕ್ಕೆ ಅವಕಾಶ ಇರುವುದಿಲ್ಲ. ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗುವುದಿಲ್ಲ ಎಂದು ಆಯೋಗ ಹೇಳಿದೆ.
ಕಾರ್ಯಶೈಲಿ ವಿವರಿಸಲು ಮಾನ್ಯತೆ ಪಡದ ಎಂಟು ರಾಷ್ಟ್ರೀಯ ಮತ್ತು 57 ಪ್ರಾದೇಶಿಕ ಪಕ್ಷಗಳಿಗೆ ಆಯೋಗ ಆಹ್ವಾನ ಕಳುಹಿಸಿದೆ. ಆಯೋಗದ ತಾಂತ್ರಿಕ ಪರಿಣತರ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೂರನಿಯಂತ್ರಿತ ಒಂದು ಮತಗಟ್ಟೆ ಯಿಂದ ಒಟ್ಟು 72 ಕ್ಷೇತ್ರಗಳ ನಿರ್ವಹಣೆ ಸಾಧ್ಯವಿದೆ ಎಂದು ಆಯೋಗ ಹೇಳಿದೆ.
ಪದೇ ಪದೇ ವಿಳಾಸ ಬದಲಾವಣೆ ಆಗಲಿದೆ ಎಂಬುದು, ಹುಟ್ಟೂರಿನ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಬೇಡ ಎಂಬ ಭಾವನೆ, ವಲಸೆ ಹೋದ ಸ್ಥಳದ ಕುರಿತು ಭಾವನಾತ್ಮಕ ಸಂಬಂಧ ಇಲ್ಲದಿರುವ ಕಾರಣ ವಲಸಿಗರು ಕೆಲಸ ಮಾಡುವ ಸ್ಥಳದಲ್ಲಿ ಹೆಸರು ನೋಂದಣಿಗೆ ಆಸಕ್ತಿ ತೋರುತ್ತಿರಲಿಲ್ಲ. ಹೊಸ ಕ್ರಮದಿಂದ ಇಂತಹವರು ಮತದಾನ ಮಾಡಲು ಸಾಧ್ಯವಿದೆ ಎಂದು ಹೇಳಿದೆ.
Read E-Paper click here