Saturday, 23rd November 2024

ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ ಇನ್ನಿಲ್ಲ

S H Sharma

ಭುವನೇಶ್ವರ್: ಭಾರತೀಯ ನೌಕಾಪಡೆಯ 1971 ರ ಇಂಡೋ-ಪಾಕ್ ಯುದ್ಧದ ಅನುಭವಿ ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ(100) ಅವರು ಭುವನೇಶ್ವರದಲ್ಲಿ ನಿಧನರಾಗಿದ್ದಾರೆ.

ಭುವನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ಸಂಜೆ 6.20ಕ್ಕೆ ಕೊನೆಯುಸಿರೆಳೆದರು. ಇಂದು ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕಾಗಿ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬ ತಿಳಿಸಿದೆ.

ಶರ್ಮಾ ಕಳೆದ ವರ್ಷ(2021) ಡಿಸೆಂಬರ್ 1 ರಂದು ತಮ್ಮ 100 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

1971 ರ ಯುದ್ಧದ ಸಮಯದಲ್ಲಿ ಈಸ್ಟರ್ನ್ ಫ್ಲೀಟ್ ಕಮಾಂಡಿಂಗ್ ಫ್ಲಾಗ್ ಆಫೀಸರ್ ಆಗಿದ್ದರು. ಭಾರತವು 1971 ರ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. ಶರ್ಮಾ ಅವರು ಈಸ್ಟರ್ನ್ ನೇವಲ್ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಫ್‌ಒಸಿ ಇನ್ ಸಿ) ಆಗಿಯೂ ಸೇವೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.