Friday, 18th October 2024

Nawaz Sharif : ಪಾಕ್‌ಗೆ ಮೋದಿ ಬಂದಿದ್ದರೆ ಖುಷಿಯಾಗುತ್ತಿತ್ತು; ಪ್ರಧಾನಿ ನವಾಜ್ ಷರಿಫ್‌

S Jaishankar

ನವದೆಹಲಿ: ಅಕ್ಟೋಬರ್ 16ರಂದು ಶಾಂಘೈ ಸಹಕಾರ ಶೃಂಗ (ಎಸ್‌ಇ ಒ) ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್ ಜೈಶಂಕರ್ (Nawaz Sharif) ಅವರ ಪಾಕಿಸ್ತಾನ ಭೇಟಿಯ ಬಳಿಕ ಉಭಯ ದೇಶಗಳ ಸಂಬಂಧಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೊಂದು ಸಕಾರಾತ್ಮಕ ಬದಲಾವಣೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನವೂ ಈ ಬಗ್ಗೆ ವಿಶೇಷ ಒಲವು ತೋರಿದೆ. ಮೋದಿ ಪಾಕಿಸ್ತಾನಕ್ಕೆ ಬಂದಿದ್ದರೆ ಖುಷಿಯಾಗುತ್ತಿತ್ತು ಎಂದು ಹೇಳಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಎಸ್ ಜೈಶಂಕರ್, ಭಾರತ ಮತ್ತು ಪಾಕಿಸ್ತಾನ ಎರಡೂ ಹಳೆಯದನ್ನು ಮರೆತು ಇಂಧನ ಮತ್ತು ಹವಾಮಾನ ಬದಲಾವಣೆಯಂತಹ ಭವಿಷ್ಯದ ಸಮಸ್ಯೆಗಳನ್ನು ಜತೆಯಾಗಿ ನಿಭಾಯಿಸಬೇಕು ಎಂದು ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಪ್ರಕ್ರಿಯೆಯನ್ನು ಪುನರಾರಂಭಿಸುವ ಮಹತ್ವ ಒತ್ತಿ ಹೇಳಿದ ನವಾಜ್ ಷರೀಫ್, ಅದು ಹಳಿ ತಪ್ಪಲು ಬಿಡಬಾರದು ಎಂದು ಹೇಳಿದರು. ನಮ್ಮ ಆರಂಭದ ಎಳೆಗಳನ್ನು ಬಿಡಬಾರದು ಎಂದು ಷರೀಫ್ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ದಶಕಗಳ ಬಗೆಹರಿಯದ ಸಮಸ್ಯೆಯನ್ನು ಅವರು ಹೇಳಿದರು.

ಎರಡೂ ದೇಶಗಳ ಪಾಲ್ಗೊಳ್ಳುವಿಕೆ ಬಗ್ಗೆ ಭರವಸೆ ವ್ಯಕ್ತಪಡಿಸಿದ ಅವರು “75 ವರ್ಷಗಳು ಹೀಗೆ ಕಳೆದಿವೆ. ಇನ್ನೂ 75 ವರ್ಷಗಳನ್ನು ವ್ಯರ್ಥ ಮಾಡಬಾರದು ಎಂದು ಹೇಳಿದರು. ಎಸ್ಸಿಒ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಬರಬಹುದೆಂದು ಬರಬಹುದಾಗಿತ್ತು. ಮೋದಿ ಬರುವುದನ್ನು ನಾನು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ.

ನಮ್ಮ ನೆರೆ ಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಉತ್ತಮ ನೆರೆಹೊರೆಯವರಂತೆ ಬದುಕಬೇಕು” ಎಂದು ಅವರು ಹೇಳಿದರು.

ಇದನ್ನೂ ಓದಿ : Israel Airstrike: ಮತ್ತೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ಟಾಪ್‌ ಲೀಡರ್‌ ಉಡೀಸ್‌

ಎಸ್‌ಸಿಒ ಭಾಷಣದಲ್ಲಿ, ಜೈಶಂಕರ್ ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಭಯೋತ್ಪಾದನೆ, ಉಗ್ರವಾದ ಮತ್ತು ಪ್ರತ್ಯೇಕತಾವಾದದ “ಮೂರು ದುಷ್ಕೃತ್ಯಗಳಿಂದ” ನಡುವೆ ವ್ಯಾಪಾರ, ಸಂಪರ್ಕ ಮತ್ತು ಇಂಧನ ವಹಿವಾಟುಗಳನ್ನು ಉತ್ತೇಜಿಸುವುದಿಲ್ಲ ಎಂದು ಹೇಳಿದ್ದಾರೆ.