Friday, 22nd November 2024

Sabarimala Temple Open Date: ವಿಶ್ವ ವಿಖ್ಯಾತ ಶಬರಿಮಲೆ ದೇಗುಲ ನಾಳೆ ಓಪನ್‌; ಭಕ್ತರಿಗೆ ದಿವ್ಯ ಅವಕಾಶ

Sabarimala Temple Open Date

ಕೇರಳ: ವಿಶ್ವವಿಖ್ಯಾತ ಶಬರಿಮಲೆ ದೇವಸ್ಥಾನವನ್ನು ನಾಳೆ ಭಕ್ತರಿಗಾಗಿ ತೆರೆಯಲಾಗುತ್ತಿದೆ (Sabarimala Temple Open Date). ಓಣಂ ಹಬ್ಬ ಮತ್ತು ಐದು ದಿನಗಳ ಮಾಸಿಕ ಪೂಜೆಗೆ ಹಿನ್ನೆಲೆ ಶಬರಿಮಲೆಯ ಅಯ್ಯಪ್ಪ ದೇವಸ್ಥಾನವನ್ನು ಶುಕ್ರವಾರ ತೆರೆಯಲಾಗುತ್ತದೆ. ತಂತ್ರಿ ಕಂಡರಾರು ರಾಜೀವರು ಅವರ ಮಾರ್ಗದರ್ಶನದಲ್ಲಿ ಮೇಲ್ಸಂತಿ ಪಿ.ಎನ್. ಮಹೇಶ ನಂಬೂತಿರಿ ನಾಳೆ ಸಂಜೆ 5 ಗಂಟೆಗೆ ಗರ್ಭಗುಡಿ ತೆರೆಯಲಿದ್ದಾರೆ.

ನಾಳೆಯಿಂದ ದೇಗುಲದಲ್ಲಿ ಐದು ದಿನಗಳ ಕಾಲ ನಿತ್ಯ ನಿತಂತರ ಪೂಜೆ ನಡೆಯಲಿದೆ. ಇನ್ನು ವಿವಿಧ ಉಪದೇವತಾ ದೇವಾಲಯಗಳನ್ನೂ ತೆರೆಯಲಾಗುತ್ತದೆ ಮತ್ತು 18 ಪವಿತ್ರ ಮೆಟ್ಟಿಲುಗಳ ಬಳಿ ದೀಪವನ್ನು ಬೆಳಗಿಸಲಾಗುತ್ತದೆ. ಅಯ್ಯಪ್ಪಸ್ವಾಮಿ ಭಕ್ತರಿಗೆ ಶಬರಿಮಲೆ ಸಂತಸದ ಸುದ್ದಿ ಇದಾಗಿದ್ದು, ಸ್ವಾಮಿಯ ದರ್ಶನ ಮಾಡುವವರಿಗೆ ಇದೊಂದು ದಿವ್ಯ ಅವಕಾಶವಾಗಿದೆ. ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲ ಭಕ್ತರಿಗಾಗಿ ಕೆಲದಿನಗಳ ಕಾಲ ತೆರೆಯಲಿದೆ. ಓಣಂ ಹಬ್ಬದ ಪ್ರಯುಕ್ತ ಶಬರಿಮಲೆ ಅಯ್ಯಪ್ಪ ದೇವಾಲಯವು 13 ತೆರೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಪ್ರತಿವರ್ಷವೂ ಓಣಂ ಹಬ್ಬದ ಸಂದರ್ಭದಲ್ಲಿ ದೇಗುಲವನ್ನು ತೆರೆಯಲಾಗುತ್ತದೆ. ದೇಗುಲದಲ್ಲೇ ಹೂವಿನ ರಂಗೋಲಿ ಹಾಕಿ ಓಣಂ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇಗುಲದಲ್ಲಿ ವಿಶೇಷ ಪೂಜೆಗಳೂ ನಡೆಯುತ್ತವೆ. ಕೇರಳ ರಾಜ್ಯದಲ್ಲಿ ಈ ವರ್ಷ 15 ರಂದು ತಿರುವೋಣಂ ಹಬ್ಬ ಬರಲಿದೆ. ಈ ಸಂದರ್ಭದಲ್ಲಿ 13ರಂದು ಸಂಜೆ 5 ಗಂಟೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಓಣಂ ಹಬ್ಬದ ಪ್ರಯುಕ್ತ ಶಬರಿಮಲೆಗೆ ಬರುವ ಎಲ್ಲಾ ಅಯ್ಯಪ್ಪ ಭಕ್ತರಿಗೆ 15 ಮತ್ತು 16 ರಂದು ಓಣಂ ಪ್ರಯುಕ್ತ ಭೋಜನವನ್ನು ಸಹ ನೀಡಲಾಗುತ್ತದೆ. ಜೊತೆಗೆ ಅಯ್ಯಪ್ಪ ದೇವರ ದರ್ಶನ ಭಾಗ್ಯವೂ ಸಿಗಲಿದೆ. ಪುರತಾಸಿ ಮಾಸ ಪೂಜೆಯ ಸಂದರ್ಭದಲ್ಲಿ ದೇವಸ್ಥಾನವು 21 ರವರೆಗೆ ತೆರೆದಿರುತ್ತದೆ. ಈ ಸಂದರ್ಭದಲ್ಲಿ, ಎಂದಿನಂತೆ ಆನ್‌ಲೈನ್ ಮೂಲಕ ದರ್ಶನದ ಕಾಯ್ದಿರಿಸುವಿಕೆಯ ಆಧಾರದ ಮೇಲೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ದೇವಸ್ಥಾನ ತಿಳಿಸಿದೆ.

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ದರ್ಶನಕ್ಕೆಂದು ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಮಕರ ಸಂಕ್ರಾಂತಿಯಂದು ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ನೋಡಲು, ದರ್ಶನ ಪಡೆದು ಪುನೀತರಾಗಲು ಇಲ್ಲಿಗೆ ಕೊಟ್ಯಾಂತರ ಭಕ್ತರು ಧಾವಿಸಿ ಬರುತ್ತಾರೆ.

ಈ ಸುದ್ದಿಯನ್ನೂ ಓದಿ: ಭದ್ರತೆ ದೃಷ್ಟಿಯಿಂದ ಶಬರಿಮಲೆಗೆ ಅಲಂಕರಿಸಿದ ವಾಹನಗಳಿಗೆ ಅನುಮತಿ ಇಲ್ಲ: ಕೇರಳ ಹೈಕೋರ್ಟ್