Thursday, 19th September 2024

ನ.15ರವರೆಗೆ ಸಚಿನ್‌ ವಾಜೆ ಬಂಧನ ವಿಸ್ತರಣೆ

ಮುಂಬೈ: ಸುಲಿಗೆ ಆರೋಪದಡಿ ಬಂಧನದಲ್ಲಿರುವ ಮಾಜಿ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಚಿನ್‌ ವಾಜೆ ಅವರ ಪೊಲೀಸ್‌ ಕಸ್ಟಡಿ ಅವಧಿಯನ್ನು ಸ್ಥಳೀಯ ನ್ಯಾಯಾಲಯ ನ.15ರವರೆಗೆ ವಿಸ್ತರಿಸಿದೆ.

ವಾಜೆ ಅವರನ್ನು ಶನಿವಾರ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ಮನವಿ ಮಾಡಿದರು. ನ್ಯಾಯಾಲಯ 15ರವರೆಗೆ ಕಸ್ಟಡಿ ಅವಧಿಯನ್ನು ವಿಸ್ತರಿಸಿತು.

ಉದ್ಯಮಿ ಬಿಮಲ್‌ ಅಗರವಾಲ್‌ ಅವರ ದೂರು ಆಧರಿಸಿ ಗೋರೆಗಾವ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್ ಪರಂ ಬೀರ್‌ ಸಿಂಗ್ ಅವರೂ ಆರೋಪಿಯಾಗಿದ್ದಾರೆ.

 

Leave a Reply

Your email address will not be published. Required fields are marked *