ಜೈಪುರ: ಕಾಂಗ್ರೆಸ್ ನಾಯಕತ್ವ ಮತ್ತು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಹಿರಂಗವಾಗಿ ಸೆಡ್ಡು ಹೊಡೆಯುವ ಪಕ್ಷದ ನಾಯಕ ಸಚಿನ್ ಪೈಲಟ್ ಮತ್ತೊಂದು ಹೋರಾಟ ನಡೆಸುತ್ತಿದ್ದಾರೆ.
ಈ ಹಿಂದಿನ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಇತ್ತೀಚೆಗೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ “ಜನಸಂಘರ್ಷ ಯಾತ್ರೆ” ನಡೆಸುತ್ತಿದ್ದಾರೆ.
ಇಂದಿನಿಂದ ಅಜ್ಮೀರ್ನಿಂದ “ಜನಸಂಘರ್ಷ ಯಾತ್ರೆ” ಆರಂಭವಾಗಲಿದೆ. 125 ಕಿ.ಮೀ ಕ್ರಮಿಸುವ ಯಾತ್ರೆ ರಾಜಧಾನಿ ಜೈಪುರಕ್ಕೆ 5 ದಿನದಲ್ಲಿ ತಲುಪಲಿದೆ. ಇದು ಭ್ರಷ್ಟಾಚಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಯಾತ್ರೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾ ವಣೆಗೆ ಕಾಂಗ್ರೆಸ್ ಸಿದ್ಧತೆ ನಡುವೆ ಪೈಲಟ್ ಅವರು ಈ ಯಾತ್ರೆ ನಡೆಸುತ್ತಿರುವುದು ಪಕ್ಷಕ್ಕೆ ಇರುಸುಮುರುಸು ತಂದಿದೆ.
ಅಜ್ಮೀರದ ಅಶೋಕ ಉದ್ಯಾನದಿಂದ ಇಂದು (ಗುರುವಾರ) ಜನಸಂಘರ್ಷ ಯಾತ್ರೆ ಆರಂಭ ವಾಗಲಿದೆ. ಇದಕ್ಕೂ ಮೊದಲು ಪೈಲಟ್ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ಬಳಿಕ ರಾಜ್ಯ ರಾಜಧಾನಿ ಕಡೆಗೆ ನಡೆಯುವ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಯಾತ್ರೆ ಕಿಶನ್ಗಢದ ತೊಲಮಲ್ ಗ್ರಾಮದಲ್ಲಿ ರಾತ್ರಿ ತಂಗಲಿದೆ ಎಂದು ತಿಳಿದು ಬಂದಿದೆ.