ಮುಂಬೈ: ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡವು ಛತ್ತೀಸ್‌ಗಢದ ನಟ ಸಾಹಿಲ್ ಖಾನ್ ಅವರನ್ನು ಬಂಧಿಸಿದೆ.
ಬಾಂಬೆ ಹೈಕೋರ್ಟ್‌ಗೆ ನಟ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಛತ್ತೀಸ್‌ಗಢದ ಜಗದಲ್‌ಪುರದಿಂದ ಅವರನ್ನು ಬಂಧಿಸಲಾಯಿತು.
ರಾಜ್ಯದ ಕೆಲವು ಹಣಕಾಸು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ವಿವಾದಿತ ಮಹಾದೇವ್ ಬೆಟ್ಟಿಂಗ್ ಆಯಪ್‌ನ ಪ್ರವರ್ತಕರ ನಡುವಿನ ಅಕ್ರಮ ವಹಿವಾಟಿನ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ.
ಖಾನ್ ಸೇರಿರಂತೆ ಇತರ 31 ವ್ಯಕ್ತಿಗಳ ವಿರುದ್ಧ ತನಿಖೆ ನಡೆಯುತ್ತಿದೆ.