Sunday, 15th December 2024

Sai Baba Statues Row: 14 ದೇವಾಲಯಗಳ ಸಾಯಿಬಾಬಾ ವಿಗ್ರಹ ತೆರವು; ಮೃತರ ಮೂರ್ತಿಗಳಿಗೆ ದೇಗುಲದಲ್ಲಿ ಸ್ಥಳವಿಲ್ಲಎಂದ ಹಿಂದೂಪರ ಸಂಘಟನೆಗಳು

Sai Baba Statues Row

ವಾರಾಣಸಿ: ಸಾಯಿಬಾಬಾ ಮೂರ್ತಿಯನ್ನು (Sai Baba Idol) ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡುವ ವಿವಾದ ಮತ್ತೊಂದು ಬಾರಿ ಭುಗಿಲೆದ್ದಿದೆ. ಉತ್ತರ ಪ್ರದೇಶದ (uttarapradesh) ವಾರಾಣಸಿಯ (Varanasi) ಪ್ರಮುಖ ಬಡಾ ಗಣೇಶ ಮಂದಿರ (Bada Ganesh Mandir) ಸೇರಿದಂತೆ 14 ದೇವಸ್ಥಾನಗಳಲ್ಲಿ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ. ಇದರ ನೇತೃತ್ವವನ್ನು ಸನಾತನ ರಕ್ಷಕ ಸೇನೆಯ (Sanatan Rakshak Sena) ಅಜಯ್ ಶರ್ಮಾ ವಹಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನೂ 28 ದೇವಸ್ಥಾನಗಳಲ್ಲಿರುವ ಮೂರ್ತಿ ತೆರವಿಗೆ ಹಿಂದೂ ಸಂಘಟನೆಗಳು ನಿರ್ಧರಿಸಿವೆ. ಸಾಯಿಬಾಬಾ ಮುಸ್ಲಿಂ ಮತ್ತು ಸನಾತನ ಧರ್ಮದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ. ಸಾಯಿಬಾಬಾ ಅವರ ಆರಾಧನೆಗೆ ನಮ್ಮ ವಿರೋಧವಿಲ್ಲ. ಆದರೆ ಅವರ ಮೂರ್ತಿಗಳನ್ನು ದೇವಾಲಯಗಳಲ್ಲಿ ಸ್ಥಾಪಿಸಲು ನಾವು ಅನುಮತಿ ಕೊಡುವುದಿಲ್ಲ ಎಂದು ಸಂಘಟನೆಗಳು ವಾದಿಸುತ್ತಿವೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಹಿಂದೂ ಸಂಘಟನೆಯ ದೀಪಕ್ ಯಾದವ್, ಸಾಯಿಬಾಬಾ ಅವರನ್ನು “ಚಾಂದ್ ಬಾಬಾ” ಎಂದು ಉಲ್ಲೇಖಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಾನುವಾರದ ಚರ್ಚೆಯ ಅನಂತರ ಸಾಯಿಬಾಬಾ ಮೂರ್ತಿಗಳನ್ನು ದೇವಾಲಯಗಳಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು.

Sai Baba Statues Row

ಮೂರ್ತಿ ಪ್ರತಿಷ್ಠಾಪನೆ ವೇಳೆಯೇ ಪ್ರತಿಭಟನೆ ನಡೆಯಬೇಕಿತ್ತು. ಕೊನೆಗೂ ವಿಗ್ರಹ ತೆಗೆದಿದ್ದಾರೆ. ಹಿಂದೆ ಶ್ರಾವಣ ಮಾಸದಲ್ಲಿ ಅರ್ಚಕರೊಬ್ಬರು ಈ ವಿಗ್ರಹ ಇರಬಾರದು ಎಂದಿದ್ದರು. ಬ್ರಾಹ್ಮಣ ಸಮುದಾಯಕ್ಕೆ ನನ್ನ ಸಲಹೆ ಇದು. ಸಾಯಿಬಾಬಾರನ್ನು ಪೂಜಿಸಲು ಇಚ್ಛಿಸುವವರು ತಮ್ಮದೇ ಆದ ಮಂದಿರವನ್ನು ಸ್ಥಾಪಿಸಲಿ ಅದಕ್ಕೆ ಯಾವುದೇ ವಿರೋಧವಿಲ್ಲ ಎಂದರು.

ಶಿರಡಿಗೆ ಜನರ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ದೀಪಕ್, ಹಿಂದೂ ಧರ್ಮವು ಎಲ್ಲಾ ನಂಬಿಕೆಗಳಿಗೆ ಅವಕಾಶ ನೀಡುತ್ತದೆ. ಅದಕ್ಕಾಗಿಯೇ ಜನರು ಶಿರಡಿಗೆ ಭೇಟಿ ನೀಡುತ್ತಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಜನರು ಎಲ್ಲಿ ಬೇಕಾದರೂ ಪ್ರಾರ್ಥನೆ ಸಲ್ಲಿಸಬಹುದು ಮತ್ತು ಯಾರ ವೈಯಕ್ತಿಕ ಜೀವನದಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ ಎಂದರು.

ವಿಗ್ರಹವನ್ನು ತೆಗೆಯುವಾಗ ಯಾವುದೇ ಆಡಳಿತ ಅಧಿಕಾರಿಗಳು ಇರಲಿಲ್ಲ. ಶಂಕರಾಚಾರ್ಯರ ಮಾರ್ಗದರ್ಶನದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಸಾಯಿಬಾಬಾ ಅವರಿಗೆ ಯಾವುದೇ ಅಗೌರವ ಮಾಡುತ್ತಿಲ್ಲ. ಆದರೆ ಅವರಿಗೆ ಪ್ರತ್ಯೇಕ ಸ್ಥಳ ನೀಡಬೇಕು. ಮೂರ್ತಿಯನ್ನು ಬಡಾ ಗಣೇಶ ಮಂದಿರದಿಂದ ತೆಗೆಯಲಾಗಿದೆ ಎಂದು ತಿಳಿಸಿದರು.

Sai Baba statues Row: ಏಕಾಏಕಿ ಹಿಂದೂ ದೇಗುಲಗಳಿಂದ ಸಾಯಿಬಾಬಾನ ಮೂರ್ತಿಗಳು ತೆರವು

ಸನಾತನ ರಕ್ಷಕ ಸೇನೆಯ ಉತ್ತರ ಪ್ರದೇಶದ ಅಧ್ಯಕ್ಷ ಅಜಯ್ ಶರ್ಮಾ ಮಾತನಾಡಿ, ಇಲ್ಲಿಯವರೆಗೆ 14 ದೇವಾಲಯಗಳಿಂದ ಸಾಯಿಬಾಬಾ ಅವರ ವಿಗ್ರಹಗಳನ್ನು ತೆಗೆದುಹಾಕಲಾಗಿದೆ. ಇನ್ನೂ ಹೆಚ್ಚಿನ ವಿಗ್ರಹ ತೆಗೆಯಲು ಯೋಜನೆ ಮಾಡಲಾಗಿದೆ. 2013ರಲ್ಲಿ ಬಡಾ ಗಣೇಶ ಮಂದಿರದ ಆವರಣದಲ್ಲಿರುವ ಆನಂದೇಶ್ವರ ಮಹಾದೇವ ಮೂರ್ತಿಯ ಪಕ್ಕದಲ್ಲಿ ಸಾಯಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು ಎಂದರು.

ಶರ್ಮಾ ಅವರು ಸಾಯಿ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದರು. ಆದರೆ ಆರು ವರ್ಷಗಳ ಹಿಂದೆ ಅದನ್ನು ನಿಲ್ಲಿಸಿದರು. ಸಾಯಿ ಆರಾಧನೆಯನ್ನು “ಭೂತಾರಾಧನೆ” ಎಂದು ಅವರು ಹೇಳಿದ್ದಾರೆ.