ಭುವನೇಶ್ವರ: ಒಡಿಶಾ ಸರ್ಕಾರ ಹೊಸ ವರ್ಷದ ಉಡುಗೊರೆಯಾಗಿ, ಸೋಮವಾರ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನವನ್ನು ಶೇ.50 ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತೆಗೆದುಕೊಂಡ ನಿರ್ಧಾರ ವನ್ನು ಜನವರಿ 1, 2022 ರಿಂದಲೇ ಜಾರಿಗೆ ತರಲಾಗುತ್ತದೆ.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ 33,038 ಕಿರಿಯ ಶಿಕ್ಷಕರಿಗೆ ಪ್ರಯೋಜನವಾಗಲಿದೆ.
ವೇತನ ಹೆಚ್ಚಳದ ನಿರ್ಧಾರದಿಂದ 13,324 ಗುತ್ತಿಗೆ ಮತ್ತು 19,714 ನಿಯಮಿತ ಶಿಕ್ಷಕರು ಹೆಚ್ಚಿನ ವೇತನವನ್ನು ಪಡೆಯುತ್ತಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಶಿಕ್ಷಕರ ವೇತನ 7,400 ಇದ್ದು, 11,000 ರೂ.ಗೆ ಏರಿಕೆಯಾಗಲಿದೆ. ಸಾಮಾನ್ಯ ಕಿರಿಯ ಶಿಕ್ಷಕರ ವೇತನ ಪ್ರಸ್ತುತ 9,200 ಇದ್ದು, 13,800 ರೂ.ಗೆ ಹೆಚ್ಚಾಗಲಿದೆ.