Friday, 21st June 2024

ಸೇಲಂನ ಹೆದ್ದಾರಿಯಲ್ಲಿ ಅಪಘಾತ: ಆರು ಮಂದಿ ಸಾವು

ಚೆನ್ನೈ: ಲಾರಿ ಹಾಗೂ ಓಮ್ನಿ ನಡುವೆ ಸಂಭವಿಸಿದೆ ಭೀಕರ ಅಪಘಾತದಲ್ಲಿ ಒಂದು ಮಗು ಸೇರಿದಂತೆ 6 ಮಂದಿ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ತಿರುವಾಸಿ ಬಳಿಯ ತಿರುಚ್ಚಿ-ಸೇಲಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ.

ಓಮ್ನಿ ಕಾರಿನಲ್ಲಿ ಬರುತ್ತಿದ್ದ ವೇಳೆ ತಿರುಚ್ಚಿ-ಸೇಲಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಲಾರಿಯೊಂದಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ಒಂದು ಪುಟ್ಟ ಮಗು ಸೇರಿದಂತೆ ನಾಲ್ವರು ಪುರುಷರು ಮತ್ತು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.

ಕಾರಿನಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿರುಚ್ಚಿಯ ಎಸ್ಪಿ ಸುಜಿತ್ ಕುಮಾರ್ ಹೇಳಿದ್ದಾರೆ.

error: Content is protected !!