Saturday, 14th December 2024

ಅಯೋಧ್ಯೆ ತೀರ್ಪು ಕುರಿತು ಬಾಂಧವರಿಗೆ ತಿಳಿ ಹೇಳುವ ಅಗತ್ಯವಿತ್ತು: ಖುರ್ಷಿದ್

ನವದೆಹಲಿ: ಸುಪ್ರೀಂ ಕೋರ್ಟ್ ನೀಡಿದ ಅಯೋಧ್ಯೆ ತೀರ್ಪನ್ನು ತಮ್ಮ ಬಾಂಧವರಿಗೆ ವಿವರಿಸುವ ಗುರುತರವಾದ ಜವಾಬ್ದಾರಿ ತಮ್ಮ ಮೇಲಿತ್ತು ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರು ಪುಸ್ತಕವೊಂದರ ಬಗ್ಗೆ ಹೇಳಿದ್ದಾರೆ.

ಅಯೋಧ್ಯೆ ತೀರ್ಪು ಹೊರಬೀಳಲು 100 ವರ್ಷಗಳು ಬೇಕಾಗುತ್ತದೆ ಎಂದು ಮಾತಾಡಿ ಕೊಳ್ಳುತ್ತಿದ್ದರು. ಆದರೆ ತೀರ್ಪು ಹೊರಬಿದ್ದ ನಂತರ ಜನರು ತೀರ್ಪಿನಲ್ಲಿ ಏನಿದೆ ಎಂಬು ದನ್ನು ತಿಳಿದುಕೊಳ್ಳದೆಯೇ ನಾನಾ ರೀತಿಯಲ್ಲಿ ಮಾತಾಡಿಕೊಂಡರು.

ತೀರ್ಪಿನ ಬಗ್ಗೆ ವಿವರಣೆ ನೀಡಬೇಕಾದ ಅಗತ್ಯತೆ ಇತ್ತು. ಮೊದಲು ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಿದೆ. ಈಗಾಗಲೇ ದೇಶ ದಲ್ಲಿ ಉದ್ಭವವಾಗಿರುವ ಧಾರ್ಮಿಕ ಸಂಧಿಗ್ಧತೆ ವಾತಾವರಣ ಇರುವುದರಿಂದ ಅದಕ್ಕೆ ಮುಲಾಮು ಹಚ್ಚುವ ಪ್ರಯತ್ನವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನವೆಂಬರ್ 9, 2019ರಂದು 2.77 ಎಕರೆಯಷ್ಟು ವಿವಾದಾತ್ಮಕ ಪ್ರದೇಶವನ್ನು ಟ್ರಸ್ಟ್ ಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.