ಲಖನೌ: ಬರೋಬ್ಬರಿ 45ವರ್ಷಗಳ ನಂತರ ಉತ್ತರ ಪ್ರದೇಶದ (Uttara Pradesh) ಜಿಲ್ಲಾಡಳಿತ ಸಂಭಾಲ್‌ನಲ್ಲಿರು (Sambhal) ಪುರಾತನ ದೇವಾಲಯದ(Sambhal Temple) ಬಾಗಿಲನ್ನು ತೆರೆಯಲಾಗಿದೆ. 1978ರಲ್ಲಿ ಸಂಭಾಲ್‌ನಲ್ಲಿ ನಡೆದ ಕೋಮುಗಲಭೆಯಿಂದ ಈ ದೇವಾಲಯಕ್ಕೆ ಬೀಗ ಹಾಕಲಾಗಿತ್ತು. ಇದೀಗ ಪುನಃ ಬೀಗ ಹಾಕಲಾಗಿದ್ದ ದೇವಾಲಯವನ್ನು ಸಂಭಾಲ್ ಜಿಲ್ಲಾ ಅಧಿಕಾರಿಗಳು ಶುಕ್ರವಾರ ಪುನಃ ತೆರೆದಿದ್ದಾರೆ.
ಕಳೆದ ತಿಂಗಳು ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿದ್ದ ಶಾಹಿ ಜಾಮಾ ಮಸೀದಿಯಿಂದ ಅನತಿ ದೂರದಲ್ಲಿರುವ ಖಗ್ಗು ಸರೈ ಪ್ರದೇಶದ ದೇವಸ್ಥಾನದಲ್ಲಿ ಹನುಮಾನ್ ಪ್ರತಿಮೆ ಮತ್ತು ಶಿವಲಿಂಗ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1978 ರಲ್ಲಿ ನಡೆದ ಕೋಮುಗಲಭೆಯಲ್ಲಿ ಹಿಂದೂ ಸಮುದಾಯವು ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ.
#WATCH | Uttar Pradesh: Police security deployed outside the temple in Sambhal that was reopened on 14th December. The temple premises was cleaned and arrangements for electricity were made. CCTV cameras have also been installed here.
— ANI (@ANI) December 15, 2024
Patron of Nagar Hindu Sabha, Vishnu Sharan… pic.twitter.com/adpdOZT8wX
ಸಂಭಾಲ್ ಪ್ರದೇಶದಲ್ಲಿ ವಿದ್ಯುತ್ ಕಳ್ಳತನ ನಡೆಯುತ್ತಿದ್ದು, ಕಳ್ಳತನದ ವಿರುದ್ಧ ಅಭಿಯಾನದ ನೇತೃತ್ವ ವಹಿಸಿದ್ದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ವಂದನಾ ಮಿಶ್ರಾ ಅವರು ಈ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದಾಗ ದೇವಸ್ಥಾನವನ್ನು ನೋಡಿ ತಕ್ಷಣ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನಾವೆಲ್ಲರೂ ಒಟ್ಟಾಗಿ ಇಲ್ಲಿಗೆ ಬಂದು ದೇವಾಲಯವನ್ನು ಮತ್ತೆ ತೆರೆಯಲು ನಿರ್ಧರಿಸಿದ್ದೇವೆ ಎಂದು ವಂದನಾ ಮಿಶ್ರಾ ಹೇಳಿದ್ದಾರೆ. ಅದು ದಶಕಗಳಿಂದ ಮುಚ್ಚಲ್ಪಟ್ಟಿದೆ ಎಂದು ದೃಢಪಡಿಸಿದರು. ದೇವಾಲಯದ ಸಮೀಪದಲ್ಲಿ ಬಾವಿ ಕೂಡ ಇದ್ದು, ಅಧಿಕಾರಿಗಳು ಮತ್ತೆ ತೆರೆಯಲು ಯೋಜಿಸಿದ್ದೇವೆ ಎಂದು ಹೇಳಿದರು.
500 ವರ್ಷಗಳ ಪುರಾತನ ದೇವಾಲಯ
ಕೋಟ್ ಗರ್ವಿ ಪ್ರದೇಶದ ನಿವಾಸಿ ಮುಖೇಶ್ ರಸ್ತೋಗಿ ಮಾತನಾಡಿ, “ನಮ್ಮ ಪೂರ್ವಜರಿಂದ ನಾವು ಈ ದೇವಾಲಯದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಇದು ಪುರಾತನ ದೇವಾಲಯವಾಗಿದೆ ಆದರೆ ನಿರ್ದಿಷ್ಟ ಸಮುದಾಯದವರು ಮಾತ್ರ ವಾಸಿಸುತ್ತಿದ್ದರಿಂದ ಬಹಳ ಹಿಂದೆಯೇ ಇದನ್ನು ಮುಚ್ಚಲಾಗಿದೆ. ದೇವಾಲಯವು ಕನಿಷ್ಠ 500 ವರ್ಷಗಳಷ್ಟು ಹಳೆಯದಾಗಿರಬೇಕು ಎಂದು ಹೇಳಿದರು.
ಹಿಂದೂ ಮಹಾಸಭಾದ ಪೋಷಕರಾದ 82 ವರ್ಷದ ವಿಷ್ಣು ಶಂಕರ್ ರಸ್ತೋಗಿ ಅವರು ದೇವಾಲಯದೊಂದಿಗಿನ ತಮ್ಮ ವೈಯಕ್ತಿಕ ಸಂಪರ್ಕದ ಬಗ್ಗೆ ಮಾತನಾಡಿ ನಾನು ನನ್ನ ಹುಟ್ಟಿನಿಂದಲೂ ಖಗ್ಗು ಸಾರಾಯಿಯಲ್ಲಿ ವಾಸಿಸುತ್ತಿದ್ದೇನೆ. 1978 ರ ಗಲಭೆಯ ನಂತರ, ನಮ್ಮ ಸಮುದಾಯವು ಈ ಪ್ರದೇಶದಿಂದ ವಲಸೆ ಹೋಗಬೇಕಾಯಿತು. ನಮ್ಮ ಕುಲಗುರುವಿಗೆ ಸಮರ್ಪಿತವಾದ ಈ ದೇವಾಲಯಕ್ಕೆ ಅಂದಿನಿಂದ ಬೀಗ ಹಾಕಲಾಗಿದೆ. ಇದು ಪುರಾತನ ದೇವಾಲಯವಾಗಿದ್ದು, ಭಸ್ಮ ಶಂಕರ ದೇವಾಲಯ ಎಂದು ಕರೆಯಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Sambhal Violence: ಸಂಭಾಲ್ ಮಸೀದಿ ಸರ್ವೆಗೆ ಸುಪ್ರೀಂ ಕೋರ್ಟ್ ತಡೆ