Sunday, 15th December 2024

‘ಒಂದು ದೇಶ ಒಂದು ಭಾಷೆ’ ಶಾ ಕರೆಗೆ ಸಂಜಯ್ ರಾವತ್ ಬೆಂಬಲ

ಮುಂಬೈ: ‘ಒಂದು ದೇಶ ಒಂದು ಭಾಷೆ’ ಪರ ಬೆಂಬಲ ವ್ಯಕ್ತಪಡಿಸಿರುವ ಶಿವಸೇನಾ ಮುಖಂಡ ಸಂಜಯ್ ರಾವತ್, ಹಿಂದಿಯನ್ನು ದೇಶಾ ದ್ಯಂತ ಮಾತನಾಡಲಿದ್ದು, ರಾಷ್ಟ್ರ ಭಾಷೆಯನ್ನಾಗಿ ಸ್ವೀಕರಿಸಬಹುದು ಎಂದು ಶನಿವಾರ ಹೇಳಿದ್ದಾರೆ.

ಎಲ್ಲಾ ರಾಜ್ಯಗಳಲ್ಲಿ ಒಂದು ಭಾಷೆಯ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವೀಕರಿಸಬೇಕೆಂದು ಕರೆ ಕೂಡ ನೀಡಿದ್ದಾರೆ.

ಇಂಗ್ಲೀಷ್ ಗೆ ಪರ್ಯಾಯವಾಗಿ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಸ್ವೀಕರಿಸ ಬೇಕು ಎಂದು ಶಾ ಹೇಳಿಕೆ ನೀಡಿದ ಒಂದು ತಿಂಗಳ ನಂತರ ಸಂಜಯ್ ರಾವತ್ ಇದೀಗ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಶಾ ಅವರ ಹಿಂದಿ ರಾಷ್ಟ್ರ ಭಾಷೆ ಹೇಳಿಕೆ ಪ್ರಾದೇಶಿಕ ಭಾಷೆಗಳ ಅಸ್ವಿತ್ವಕ್ಕೆ ಧಕ್ಕೆ ತರುವ ಪ್ರಯತ್ನವೆಂದು ದಕ್ಷಿಣ ರಾಜ್ಯದ ಹಲವು ರಾಜಕೀಯ ಮುಖಂಡರು ಖಂಡಿಸಿದ್ದರು. ಇತ್ತೀಚೆಗೆ ನಟ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ನಡುವೆ ಹಿಂದಿ ರಾಷ್ಟ್ರ ಭಾಷೆ ವಿಚಾರವಾಗಿ ಟ್ವೀಟ್ ಸಮರವೇ ನಡೆದಿತ್ತು.

ಹಿಂದಿ ಮಾತನಾಡುವವರು ಕೊಯಂಬತ್ತೂರಿನಲ್ಲಿ ಪಾನಿ ಪೂರಿ ಮಾರುತ್ತಿದ್ದಾರೆ ಎಂಬ ತಮಿಳುನಾಡು ಶಿಕ್ಷಣ ಸಚಿವ ಪೊನ್ಮುಡಿ ಹೇಳಿಕೆ ಕುರಿತು ಸಂಜಯ್ ರಾವತ್ ಹಿಂದಿ ಪರ ಹೇಳಿಕೆ ನೀಡಿದ್ದಾರೆ.