Saturday, 23rd November 2024

ಸಂಸದ್ ಟಿವಿಯ ಯೂಟ್ಯೂಬ್ ಖಾತೆ ರದ್ದು

ನವದೆಹಲಿ: ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಸತ್ತಿನ ಅಧಿವೇಶನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ಪ್ರಸಾರ ಮಾಡುವ ಸಂಸದ್ ಟಿವಿಯ ಯೂಟ್ಯೂಬ್ ಖಾತೆಯನ್ನು ರದ್ದುಗೊಳಿಸಲಾಗಿದೆ.

ಚಾನೆಲ್‌ನ್ನು ಪ್ರವೇಶಿಸಲು ಯತ್ನಿಸಿದಾಗ, ಯೂಟ್ಯೂಬ್‌ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಖಾತೆಯನ್ನು ರದ್ದು ಮಾಡ ಲಾಗಿದೆ ಎನ್ನುವ ವಿಂಡೋ ಕಾಣಿಸುತ್ತದೆ. ಇದರ ಸ್ಕ್ರೀನ್‌ಶಾಟ್ ತೆಗೆದು ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

ಆದರೆ ಸಂಸದ್ ಟಿವಿಯ ಯುಟ್ಯೂಬ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಹಾಗೂ ಹೆಸರನ್ನು ಇಥೆರಿಯಮ್ ಎಂದು ಬದಲಾಯಿಸಲಾಗಿದೆ ಎಂದು ವರದಿ ಮಾಡಿದೆ.