Thursday, 12th December 2024

ಸೋಲಾರ್ ಹಗರಣ: ಉದ್ಯಮಿ ಸರಿತಾ ನಾಯರ್ ಬಂಧನ

ತಿರುವನಂತಪುರಂ: ವಿವಾದಾತ್ಮಕ ಮಹಿಳಾ ಉದ್ಯಮಿ ಸರಿತಾ ನಾಯರ್ ಅವರನ್ನು ಕೋಜಿಕ್ಕೋಡ್ ಪೊಲೀಸರು ಬಂಧಿಸಿ ದ್ದಾರೆ. ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.

ಅಬ್ದುಲ್ ಮಜೀದ್ ಎಂಬವರು ದಾಖಲಿಸಿದ್ದ ದೂರಿನ ವಿಚಾರಣೆಗೆ ಹಾಜರಾಗಲು ಸರಿತಾ ನಾಯರ್ ವಿಫಲರಾಗಿದ್ದರು.

ಕಳೆದ ತಿಂಗಳು ತೀರ್ಪು ಬರಬೇಕಿತ್ತು, ಆದರೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರಥಮ ದರ್ಜೆ ನ್ಯಾಯಾಲಯ ವಿಚಾರಣೆ ಯನ್ನು ಪೂರ್ಣಗೊಳಿಸಿರಲಿಲ್ಲ, ಹೀಗಾಗಿ ವಾರಂಟ್ ಹೊರಡಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ಪೊಲೀಸರು ಸರಿತಾ ನಾಯರ್ ಅವರನ್ನು ಬಂಧಿಸಿದ್ದಾರೆ.

ಆಲಪ್ಪುಳ ಮತ್ತು ಪಥನಮತ್ತಟ್ಟ ಜಿಲ್ಲೆಗಳಲ್ಲೂ ಸರಿತಾ ವಿರುದ್ಧ ಇದೇ ರೀತಿಯ ವಾರಂಟ್‌ಗಳು ಬಾಕಿ ಉಳಿದಿವೆ. ಕೋಜಿಕ್ಕೋಡ್ ಗೆ ತೆರಳುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.