Friday, 22nd November 2024

ಬುಲೆಟ್ ರೈಲು ಯೋಜನೆಯ ಉಸ್ತುವಾರಿ ಸತೀಶ್ ಅಗ್ನಿಹೋತ್ರಿ ವಜಾ

ನವದೆಹಲಿ: ಬುಲೆಟ್ ರೈಲು ಯೋಜನೆಯ ಉಸ್ತುವಾರಿ ವಹಿಸಿದ್ದ ಎನ್‌ಎಚ್‌ ಎಸ್‌ಆರ್‌ ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿ ಕೆಲಸದಿಂದ ವಜಾಗೊಳಿಸಿದೆ.

ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಯೋಜನೆಯ ನಿರ್ದೇಶಕ ರಾಜೇಂದ್ರ ಪ್ರಸಾದ್’ಗೆ ಮೂರು ತಿಂಗಳ ಕಾಲ ಅಧಿಕಾರ ಹಸ್ತಾಂತ ರಿಸಲಾಗಿದೆ. ಅಗ್ನಿಹೋತ್ರಿ ವಿರುದ್ಧ ಹುದ್ದೆಯ ದುರುಪಯೋಗ ಮತ್ತು ಅನಧಿ ಕೃತ ರೀತಿಯಲ್ಲಿ ಹಣ ವನ್ನು ಖಾಸಗಿ ಕಂಪನಿಗೆ ವರ್ಗಾಯಿಸ ಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಎನ್‌ಎಚ್‌ಎಸ್‌ಆರ್ಸಿಎಲ್ ಎಂಡಿ ಅವರು ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ ನ ಸಿಎಂಡಿಯಾಗಿ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಖಾಸಗಿ ಕಂಪನಿಯೊಂದಿಗೆ ನಡೆಸಿದ ‘ಕ್ವಿಡ್ ಪ್ರೋಕೋ’ ಒಪ್ಪಂದದ ಆರೋಪಗಳ ಬಗ್ಗೆ ತನಿಖೆ ನಡೆಸು ವಂತೆ ಜೂನ್ 2 ರಂದು ಲೋಕಪಾಲ್ ನ್ಯಾಯಾಲಯವು ಸಿಬಿಐಗೆ ನಿರ್ದೇಶಿಸಿದ ನಂತರ ಅಗ್ನಿಹೋತ್ರಿ ಅವರ ಸೇವೆಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಸತೀಶ್ ಅಗ್ನಿಹೋತ್ರಿ ಅವರ ಹುದ್ದೆಯನ್ನು ರದ್ದುಗೊಳಿಸಲು ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿದೆ.