Sunday, 15th December 2024

ಸತ್ಯೇಂದ್ರ ಜೈನ್’ಗೆ ಜೂ.13ರವರೆಗೆ ಇಡಿ ಕಸ್ಟಡಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜೂನ್ 13ರವರೆಗೆ ಇಡಿ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಮೇ 30 ರಂದು ಜೈನ್ ಅವರನ್ನು ಇಡಿ ಬಂಧಿಸಿತ್ತು.

ಫೆಬ್ರವರಿ 2015 ರಿಂದ 2017ರ ನಡುವೆ ಸತ್ಯೇಂದ್ರ ಜೈನ್ ಹಾಗೂ ಅವರ ಪತ್ನಿ ತಮ್ಮ ಆದಾಯಕ್ಕಿಂತ ಹೆಚ್ಚು ರೂ. 1.47 ಕೋಟಿ ರೂಪಾಯಿ ಅಕ್ರಮ ಆಸ್ತಿ ಸಂಪಾದನೆಯ ಆರೋಪವಿದೆ.

ಜ್ಯೂವೆಲರಿ ಶಾಪ್ ಸೇರಿದಂತೆ ಜೈನ್ ಹಾಗೂ ಅವರ ಸಹಚರರ ನಿವಾಸಗಳ ಮೇಲೆ ದಾಳಿ ನಡೆಸಿ, ರೂ. 2.85 ಕೋಟಿ ನಗದು ಹಾಗೂ 133 ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆಯ ಲಾಗಿದೆ ಎಂದು ತನಿಖಾ ಏಜೆನ್ಸಿ ಹೇಳಿದೆ. ಸಚಿವರ ನಿವಾಸ, ಜ್ಯೂವೆಲರಿ ಶಾಪ್ ಸೇರಿ ದಂತೆ ಆರೇಳು ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆದಿರುವುದಾಗಿ ಇಡಿ ಹೇಳಿಕೆಯಲ್ಲಿ ತಿಳಿಸಿತ್ತು.

ಬಂಧನಕ್ಕೊಳಗಾಗಿರುವ ಸಚಿವರಿಗೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪ ಡಿಸಿದ್ದು, ಹಿಮಾಚಲ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.