Saturday, 23rd November 2024

ನಾಲ್ಕನೇ ತ್ರೈಮಾಸಿಕ: ಶೇ.80 ರಷ್ಟು ಲಾಭ ಗಳಿಸಿದ ಎಸ್‌ಬಿಐ

ಮುಂಬೈ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ಮಾರ್ಚ್ 31 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ, ಬ್ಯಾಂಕ್ ಶೇ.80ರಷ್ಟು ಲಾಭವನ್ನು ವರದಿ ಮಾಡಿದೆ.

ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್ 3,580.8 ಕೋಟಿ ರೂ.ಗಳ ಲಾಭ ಹೊಂದಿದ್ದು, ಈ ಬಾರಿ 6,450.7 ಕೋಟಿ ರೂ.ಗೆ ಏರಿದೆ. ಎಸ್‌ಬಿಐ ಹೂಡಿಕೆದಾರರಿಗೆ ಪ್ರತಿ ಷೇರಿಗೆ 4 ರೂ.ಗಳ ಡಿವಿಡೆಂಡ್ ಘೋಷಿಸಿದೆ.

ಮೇ 2017 ರಲ್ಲಿ ಬ್ಯಾಂಕ್ ಪ್ರತಿ ಷೇರಿಗೆ 2.6 ರೂ.ಗಳ ಡಿವಿಡೆಂಡ್ ಪಾವತಿಸಿದೆ. ಈ ಬಾರಿ ಲಾಭಾಂಶ ಪಾವತಿಸುವ ದಿನಾಂಕವನ್ನು ಜೂನ್ 18, 2021 ಎಂದು ನಿಗದಿ ಪಡಿಸಲಾಗಿದೆ. ಇನ್ನು ಎಸ್‌ಬಿಐನ ಬಡ್ಡಿ ಆದಾಯವೂ ಶೇ 18.9 ರಷ್ಟು ಏರಿಕೆಯಾಗಿ 27,067 ಕೋಟಿ ರೂ. ತಲುಪಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಈ ಆದಾಯ 22,767 ಕೋಟಿ ರೂ. ನಷ್ಟಿತ್ತು.