Thursday, 19th September 2024

ಎಸ್.ಬಿ.ಐ ನೂತನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರ ನೇಮಕ

ಮುಂಬೈ/ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರ ಅವರನ್ನು ಮಂಗಳವಾರ ಸರ್ಕಾರದಿಂದ ನೇಮಕ ಮಾಡಲಾಗಿದೆ. ಅಕ್ಟೋಬರ್ 7ನೇ ತಾರೀಕಿ ನಿಂದ ಮೂರು ವರ್ಷದ ಅವಧಿಗೆ ಅವರನ್ನು ನೇಮಿಸಲಾಗಿದೆ.

ದಿನೇಶ್ ಕುಮಾರ್ ಅವರು ಎಸ್ ಬಿಐ ಅಧ್ಯಕ್ಷರಾಗಿರುವ ರಜನೀಶ್ ಕುಮಾರ್ ಸ್ಥಾನಕ್ಕೆ ಬರಲಿ ದ್ದಾರೆ. ರಜನೀಶ್ ಅವರ ಮೂರು ವರ್ಷದ ಅವಧಿ ಅಕ್ಟೋಬರ್ 7ನೇ ತಾರೀಕಿಗೆ ಕೊನೆಯಾಗು ತ್ತದೆ. 2017ರಲ್ಲಿ ಅಧ್ಯಕ್ಷರ ಹುದ್ದೆಯ ಸ್ಪರ್ಧಿಗಳಲ್ಲಿ ಖಾರ ಹೆಸರು ಕೂಡ ಕೇಳಿ ಬಂದಿತ್ತು. 2016ರ ಆಗಸ್ಟ್ ನಲ್ಲಿ ದಿನೇಶ್ ಕುಮಾರ್ ಅವರನ್ನು ಮೂರು ವರ್ಷದ ಅವಧಿಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

2019ರಲ್ಲಿ ಎರಡು ವರ್ಷಗಳ ವಿಸ್ತರಣೆ ಸಿಕ್ಕಿತ್ತು. ದಿನೇಶ್ ಖಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ಲೋಬಲ್ ಬ್ಯಾಂಕಿಂಗ್ ವಿಭಾಗದ ನೇತೃತ್ವ, ಮಂಡಳಿ ಮಟ್ಟದ ಹುದ್ದೆಗಳನ್ನು ನಿರ್ವಹಿಸಿದವರು ಮತ್ತು ನಾನ್ ಬ್ಯಾಂಕಿಂಗ್ ಅಂಗಸಂಸ್ಥೆಗಳ ವ್ಯವಹಾರ ಗಳ ನಿಗಾ ವಹಿಸು ತ್ತಾರೆ.

ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಆಯ್ಕೆ ಆಗುವ ಮುನ್ನ ಎಸ್ ಬಿಐ ಫಂಡ್ಸ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮೆಟೆಡ್ ಸಿಇಒ ಹಾಗೂ ಎಂ.ಡಿ. ಆಗಿದ್ದರು. 1984ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಎಸ್ ಬಿಐ ಸೇರ್ಪಡೆಯಾದರು.