Saturday, 23rd November 2024

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ: ಕೇಂದ್ರ ಸರ್ಕಾರಕ್ಕೆ ’ಸುಪ್ರೀಂ’ ನೋಟೀಸು ಜಾರಿ

ನವದೆಹಲಿ : ಗಣನೀಯವಾಗಿ ಹೆಚ್ಚುತ್ತಿರುವ ಕೋವಿಡ್ ರೂಪಾಂತರಿ ಅಲೆಯ ಬಗ್ಗೆ ಸುಪ್ರೀಂ ಕೋರ್ಟ್ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹಾಗೂ ನ್ಯಾಯಾಧೀಶರಾದ ಎಲ್ ನಾಗೇಶ್ವರ ರಾವ್, ಎಸ್ ರವಿಂದ್ರ ಭಟ್ ಅವರಿದ್ದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಈ ಕುರಿತು ನೋಟಿಸ್ ಜಾರಿ ಮಾಡಿದೆ.

ವೈದ್ಯಕೀಯ ಆಮ್ಲಜನಕದ ಪೂರೈಕೆ, ಅಗತ್ಯ ಔಷಧಗಳ ಪೂರೈಕೆ, ಲಸಿಕೆ ವಿತರಣೆಯ ವಿಧಾನ ಹಾಗೂ ಬಗೆ, ಲಾಕ್ ಡೌನ್ ಘೋಷಣೆ ಮಾಡುವಲ್ಲಿ ರಾಜ್ಯ ಸರ್ಕಾರದ ಅಧಿಕಾರ, ಎಂಬ ನಾಲ್ಕು ವಿಚಾರಗಳ ಬಗ್ಗೆ ದೇಶ ಒಂದು ವಿಧಾನದಲ್ಲಿ ನಡೆಯ ಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ತಿಳಿಸಿದ್ದಾರೆ.

ಕಳೆದ 24ಗಂಟೆಗಳಲ್ಲಿ ಮಾರಣಾಂತಿಕ ಕೋವಿಡ್ 2ನೇ ಅಲೆ ದಾಖಲೆಯ 3.14 ಲಕ್ಷ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1.59 ಕೋಟಿಗೆ ಏರಿಕೆಯಾಗಿದೆ.